Advertisement
ರಾಜ್ಯದ ಶೇ.50ಕ್ಕಿಂತ ಅಧಿಕ ಪ್ರದೇಶಕ್ಕೆ ಜೀವನಾಡಿಯಾಗಿ ಸುಮಾರು 6 ಲಕ್ಷ ಎಕರೆ ರೈತರ ಜಮೀನಿಗೆ ನೀರಾವರಿ ಹಾಗೂ ಕುಡಿವ ನೀರು ಒದಗಿಸುತ್ತಿರುವ ಆಲಮಟ್ಟಿ ಜಲಾಶಯವು ಸೂಕ್ಷ್ಮ ಪ್ರದೇಶಗಳಲ್ಲೊಂದಾಗಿರುವುದರಿಂದ ಹೈ ಅಲರ್ಟ್ ಘೋಷಿಸಿ ಜಲಾಶಯದ ಭದ್ರತೆಗಾಗಿನಿಯೋಜನೆಗೊಂಡಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳು ಪಹರೆ ಹಾಗೂ ತಪಾಸಣೆ ಬಿಗಿಗೊಳಿಸಿದ್ದಾರೆ.
ಈಗ ಇತಿಹಾ ಸ. ಅಲ್ಲದೇ ಬೆಳಗಾವಿ ವಿಮಾನನಿಲ್ದಾಣದಲ್ಲಿ ಶಂಕಿತ ಉಗ್ರಗಾಮಿ ಬಳಿ ಸಿಕ್ಕಿರುವ ವಸ್ತುಗಳಲ್ಲಿ ಆಲಮಟ್ಟಿ ಜಲಾಶಯದ ನಕ್ಷೆ ದೊರಕಿತ್ತಲ್ಲದೇ ಕೆಲ ದಿನಗಳಿಂದ ದೇಶದ ಗಡಿ ಪ್ರದೇಶದಲ್ಲಿ ಉಗ್ರರು ನಡೆಸುತ್ತಿರುವ ಹೇಯ ಕೃತ್ಯದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶದಂತೆ ಜಲಾಶಯದ ನಾಲ್ಕು ದಿಕ್ಕಿನಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿನ ಸಂಗೀತ ನೃತ್ಯ ಕಾರಂಜಿ, ರಾಕ್ ಉದ್ಯಾನ, ಮೊಘಲ್ ಉದ್ಯಾನ, ಗೋಪಾಲಕೃಷ್ಣ ಉದ್ಯಾನ, ಲವಕುಶ ಉದ್ಯಾನ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ಹಾಗೂ ಕೆಲ ಆಯ್ದ ಸೂಕ್ಷ್ಮ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲಾಗಿದೆ.
Related Articles
Advertisement
ಹೆಚ್ಚಿದ ಭದ್ರತೆ: ಜಲಾಶಯದ ಸುತ್ತಮುತ್ತಲಿನ ಭದ್ರತೆಗಾಗಿ ಕೆಎಸ್‌ಐಎಸ್‌ಎಫ್‌ನ ಐವರು ಪಿಎಸ್‌ಐ ಸೇರಿ 91 ಪೊಲೀಸರು ದಿನದ 24 ಗಂಟೆಯೂ ಶಸ್ತ್ರ ಸಜ್ಜಿತವಾಗಿ ನಿಯೋಜನೆಗೊಂಡಿದ್ದಾರೆ. ಜಲಾಶಯದ ನಾನಾ ಕಡೆ ನಿಯೋಜನೆಗೊಂಡ ಪೊಲೀಸರ ವಿವರಣೆಯನ್ನು ಪ್ರತಿ 8 ಗಂಟೆಗೊಮ್ಮೆ ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ.
ಜಲಾಶಯ ಸೇರಿದಂತೆ ಕೆಲ ಪ್ರದೇಶಗಳನ್ನು ಇಲಾಖೆ ವ್ಯಾಪ್ತಿಯನ್ನು ಗುರುತಿಸಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದ್ದು ಈಗಾಗಲೇ ಭದ್ರತೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಮತ್ತೇ ಇಲಾಖೆ ಹಿರಿಯ ಅಧಿಕಾರಿಗಳ ಆದೇಶದಂತೆ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ ಎಂದು ಆಲಮಟ್ಟಿ ವಿಭಾಗದ ಮುಖ್ಯಸ್ಥ ಈರಪ್ಪ ವಾಲಿ ತಿಳಿಸಿದ್ದಾರೆ.