Advertisement

ಸ್ಮಾರಕ ಬದಲು ವನ ನಿರ್ಮಿಸಿ

10:52 AM Feb 28, 2019 | |

ಚನ್ನರಾಯಪಟ್ಟಣ: ಹುತಾತ್ಮರಾದ ವೀರ ಯೋಧರ ಸ್ಮಾರಕ ನಿರ್ಮಾಣ ಮಾಡುವ ಬದಲಾಗಿ ಯೋಧರ ಹೆಸರಿನಲ್ಲಿ ವನ ನಿರ್ಮಾಣ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು ಎಂದು ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ ಸಿ.ಎನ್‌.ಅಶೋಕ್‌ ಮನವಿ ಮಾಡಿದರು.

Advertisement

ಪಟ್ಟಣದ ಹೊರವಲಯದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ತಾಲೂಕು ಆಡಳಿತದಿಂದ ಪುಲ್ವಾಮಾ ದುರಂತದಲ್ಲಿ ವೀರ ಮರಣ ಹೊಂದಿದ 49 ಯೋಧರ ಸ್ಮರಣಾರ್ಥ 49 ಗಿಡ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಧರ ಗ್ರಾಮಗಳಲ್ಲಿ ಸರ್ಕಾರಿ ಗೋಮಾಳ, ಗುಂಡು ತೋಪುಗಳಲ್ಲಿ ತಾಲೂಕು ಆಡಳಿತದಿಂದ ವನ ನಿರ್ಮಾಣ ಮಾಡಿ ಹುತಾತ್ಮ ಯೋಧರ ಹೆಸರು ಇಡಬೇಕು ಎಂದರು. 

ದೇಶಾದ್ಯಂತ ಶ್ರದ್ಧಾಂಜಲಿ: ದೇಶಾದ್ಯಂತ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಮೌನ ಆಚರಣೆ ಮೂಲಕ ಶ್ರದ್ಧಾಂಜಲಿ ಮಾಡುವುದರಿಂದ ಕೇಲವ ಒಂದು ದಿವಸಕ್ಕೆ ಸೀಮಿತವಾಗುತ್ತದೆ ಅವರ ಹೆಸರಿನಲ್ಲಿ ಗಿಡ ನೆಟ್ಟು ಪೋಷಣೆ ಮಾಡುವುದರಿಂದ ಹುತಾತ್ಮರ ಹೆಸರು
ಅಜರಾಮರವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಣ್ಯ ಇಲಾಕೆ ಮೂಲಕ ಮಾಡಿಸಲು ಮುಂದಾದರೆ ಸಾರ್ವಜನಿಕರು ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.

ಯೋದರ ಹೆಸರಲ್ಲಿ ಗಿಡ ನೆಡಿ: ತಹಶೀಲ್ದಾರ್‌ ಜೆ.ಬಿ.ಮಾರುತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ದೇಶಕ್ಕಾಗಿ ಬಲಿದಾನ ಆದವರ ಹೆಸರು ಬಹುಕಾಲ ಸಮಾಜದಲ್ಲಿ ಉಳಿಯುಬೇಕೆಂದರೆ ಅವರ ಹೆಸರಿನಲ್ಲಿ ನಾವುಗಳು ಗಿಡ ನೆಟ್ಟು ಪೋಷಣೆ ಮಾಡಬೇಕು. ಸೈನಿಕರು ಬದುಕಿದ್ದಾಗ ನಮಗೆ
ನೆರಳಾಗಿದ್ದರು ಅವರು ಹುತಾತ್ಮರಾದ ಮೇಲೆ ಅವರ ಹೆಸರಿನ ಮರಗಳು ಪ್ರಾಣಿ ಪಕ್ಷಿಗಳಿಗೆ ನೆರಳಾಗುವಂತೆ ಮಾಡುವುದು ನಮ್ಮಗಳ ಆಧ್ಯ ಕರ್ತವ್ಯವಾಗಿದೆ ಎಂದರು.

ಉತ್ತಮವಾಗಿ ವ್ಯಾಸಂಗ ಮಾಡಿ: ಬಡವರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಿದೆ ಬಡವರ, ರೈತರ ಹಾಗೂ ಕೂಲಿ ಕಾರ್ಮಿಕರ ಸೇವೆ ಮಾಡುತ್ತಾರೆ. ಹಣವಂತ ಮಕ್ಕಳಿಗೆ ಅಧಿಕಾರ ದೊರೆತರೆ ಬಡವರ ಕಲ್ಯಾಣ ಆಗುವುದಿಲ್ಲ ಅವರ ಹಿಂಬಾಲಕರಿಗೆ ಹೊಗಳುಭಟ್ಟರಿಗೆ ಮಾತ್ರ ಸಹಕಾರ ಆಗಲಿದೆ. ಇದನ್ನು ಮನದಲ್ಲಿ ಇಟ್ಟುಕೊಂಡು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಾದ ತಾವು ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆ ಅಲಂಕರಿಸ ಬೇಕು ಎಂದು ಹೇಳಿದರು.

Advertisement

ಅಂಕ ಗಳಿಕೆಗೆ ಸೀಮಿತರಾಗದಿರಿ: ಕೇವಲ ಅಂಕ ಗಳಿಕೆಗೆ ವ್ಯಾಸಂಗ ಮಾಡದೇ ಇಂದಿನ ಓದು ಮುಂದಿನ ಸಮಾಜದ ದಾರಿ ದೀಪವಾಗಬೇಕು. ಪರೀಕ್ಷೆ ವೇಳೆ ಹೆಚ್ಚು ಓದುವ ಬದಲಾಗಿ ನಿತ್ಯವೂ ಸಮಯ ಪ್ರಜ್ಞೆಯಿಂದ ವ್ಯಾಸಂಗ ಮಾಡಬೇಕು, ಪರಿಸರವನ್ನು ಪ್ರೀತಿಸಿದರೆ ಸಾಲದು ಉಳಿಸಿ
ಬೆಳೆಸಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.

 ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ್‌, ಬಿಸಿಎಂ ಅಧಿಕಾರಿ ಮಂಜುನಾಥ್‌, ಮಕ್ಕಳ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳಾದ ಸಚ್ಚಿನ್‌, ನೀಲಾ, ಮಹದೇವ್‌, ಜಯರಾಂ, ನುಗ್ಗೇಹಳ್ಳಿ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಸಂತೋಷ, ಗೂರಮಾರನಹಳ್ಳಿ ಶಾಲೆ ಪ್ರಾಂಶುಪಾಲೆ ಕಲ್ಪನಾ
ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next