Advertisement
10 ಎಕೆರೆ ವಿಶಾಲವಾದ ಮೈದಾನ: ಸರ್ಕಾರಿ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವಿದ್ಯಾರ್ಥಿಗಳು ಬರುತ್ತಿ ರುವುದು. ಸುಮಾರು 10ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ ಕಾಲೇಜು ಆವರಣವಿದೆ. ಪ್ರೌಢಶಾಲೆ ಹಾಗೂ ಪಿಯು ಕಾಲೇಜುವರೆಗಿದ್ದು, ಇಂದಿಗೂ ಈ ಕಾಲೇಜಿ ನಲ್ಲಿ ಪ್ರತಿಭಾವಂತ ಬಡ, ಮಧ್ಯಮ ವರ್ಗದ ಸಹ ಸ್ರಾರು ಮಂದಿ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಿದೆ. ನುರಿತ ಶಿಕ್ಷಕರು ಪ್ರಾಧ್ಯಾಪಕರು ಸಹ ಮಕ್ಕಳಿಗೆ ಬೋಧನೆ ನೀಡು ತ್ತಿದ್ದಾರೆ. ಈ ಕಾಲೇಜಿನಲ್ಲಿ ತಾಲೂಕಿಗೆ ಬಹು ದೊಡ್ಡ ಆಟದ ಮೈದಾನವಿರುವುದು ವಿಶೇಷ. ಇದರಿಂದಲೇ ಈ ಶಾಲೆ ಮತ್ತು ಕಾಲೇಜಿಗೆ ತುಂಬ ಹೆಸರಿದೆ. ಇದರ ಅಳಿವು ಉಳಿವು ಜನಪ್ರತಿನಿಧಿಗಳ ಕೈಯಲ್ಲಿದೆ.
Related Articles
Advertisement
ಕಾರ್ಯಕ್ರಮಗಳಿಗೆ ಬಳಕೆ: ಆಗಿನ ಕಾಲದಲ್ಲಿ ಮುಂದಾಲೋಚಯಿಂದಲೇ ವಿಶಾಲವಾದ ಜಾಗದಲ್ಲಿ ಕಾಲೇಜು ಹಾಗೂ ಅಗತ್ಯ ಮೈದಾನವನ್ನು ನಿರ್ವಿಸಿದ್ದರು. ಚುನಾವಣೆಗಳ ಮತ ಏಣಿಕೆಗೂ ಇದೇ ಕಾಲೇಜನ್ನು ಸರ್ಕಾರ ಬಳಸಿಕೊಳ್ಳುವುದು ಸರ್ವೇ ಸಾಮಾನ್ಯ. ಶಿಕ್ಷಣ ಇಲಾಖೆಯ ಸರ್ಕಾರಿ ಕಾರ್ಯಕ್ರಮಗಳಿರಬಹುದು, ಕ್ರೀಡಾ ಸ್ಪರ್ಧೆಯ ಚಟುವಟಿಕೆಗಳಿರಬಹುದು ಇದೇ ಮೈದಾನದಲ್ಲೇ ಈಗಲೂ ನಡೆಯುವುದು. ತಾಲೂಕಿಗೆ ಯಾರೇ ಗಣ್ಯರು ಹೆಲಿಕಾಪ್ಟರ್‌ನಲ್ಲಿ ಬಂದರೂ ಇದೇ ಮೈದಾನವೇ ಬೇಕು. ಇಂಥ ಸುಂದರವಾದ ಕಾಲೇಜು ಹಾಗೂ ಮೈದಾನ ಈಗ ದುಸ್ಥಿತಿ ತಲುಪಿದೆ.
ಪ್ರತ್ಯೇಕ ಶೌಚಾಲಯವಿಲ್ಲ: ವಿಶಾಲವಾದ ಸ್ಥಳವಿದ್ದರೂ ಸಹ ಎಡವಟ್ಟಿನ ಎಂಜಿನಿಯರ್ ತಾಳಕ್ಕೆ ಕುಣಿದ ಗಣ್ಯರು ಇಂಥ ಸರ್ಕಾರಿ ಮಾದರಿ ಕಾಲೇಜಿನ ಮೈದಾನವನ್ನು ಸಮರ್ಪಕವಾಗಿ ಉಳಿಸಿಕೊಳ್ಳುವ ಚಿಂತನೆಯೂ ಇಲ್ಲದೆ ಕೆಲವು ಕೊಠಡಿಗಳನ್ನು ಮೈದಾನದಲ್ಲೇ ಎಲ್ಲಂದರಲ್ಲಿ ನಿರ್ಮಿಸುವ ಮೂಲಕ ಕಾಲೇಜಿನ ಅಂದ ಕೆಡಿಸಿದ್ದಾರೆ. ಈ ಕಾಲೇಜಿನಲ್ಲಿ ಗಂಡು ಮಕ್ಕಳು, ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೂ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿಲ್ಲ. ಆದಷ್ಟು ಬೇಗ ಮಾದರಿ ಕಾಲೇಜು ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡಬೇಕಿದೆ.
ನಾನಾ ರಂಗದಲ್ಲಿ ಸೇವೆದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸೆ.26, 1948ರಲ್ಲಿ ಆಗಿನ ಮೈಸೂರು ಪ್ರಧಾನ ಸಚಿವರಾಗಿದ್ದ ಕೆ. ಚಂಗಲ್‌ರಾಯರೆಡ್ಡಿ ಈ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇಲ್ಲಿಯವರೆಗೂ ಈ ಪ್ರೌಢಶಾಲೆ ಮತ್ತು ಕಾಲೇಜಿ ನಲ್ಲಿ ಲಕ್ಷಾಂತರ ಮಂದಿ ವಿದ್ಯೆ ಕಲಿತಿದ್ದಾರೆ. ಎಂಎಲ್‌ಸಿ ಎಚ್.ಎಂ.ರೇವಣ್ಣ, ದಿ.ಜವರಪ್ಪ, ಸೇರಿದಂತೆ ಅನೇಕ ರಾಜಕೀಯ ಮುತ್ಸದಿಗಳು, ಸಾಹಿತಿ ದಲಿತ ಕವಿ ಸಿದ್ದಲಿಂಗಯ್ಯ, ಅನೇಕ ಕ್ರೀಡಾಪಟು ಗಳು ಇನ್ನೂ ಅನೇಕರು ರಂಗಗಳಲ್ಲಿ ಸೇವೆ ಸಲ್ಲಿಸಿದ ಅಗ್ರಗಣ್ಯರ ಕೀರ್ತಿ ಈ ಕಾಲೇಜಿಗಿದೆ. ಈಗಲೂ ಸಹಸ್ರಾರು ಮಂದಿ ಸರ್ಕಾರದಲ್ಲಿ ಸೇವಾನಿರತರಾಗಿ ಕರ್ತವ್ಯ ನಿರ್ವಸುತ್ತಿರುವುದು ಹೆಮ್ಮೆಯ ವಿಷಯ. ಕಾಲೇಜು ಕಾಯ ಕಲ್ಪಕ್ಕೆ ಸಕಲ ಸಿದ್ಧತೆ ನಡೆದಿದೆ. ತಾನು ಶಾಸಕನಾದ ಮೇಲೆ ಶಿಥಿಲ ಶಾಲಾ ಕಾಲೇಜುಗಳ ಪುನರ್ ನಿರ್ಮಾಣಕ್ಕೆ ಈಗಾಗಲೇ ಅನುದಾನ ಮಂಜೂರು ಮಾಡಲಾಗಿದೆ. ಅಗತ್ಯ ಯೋಜನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಚಾಲನೆ ನೀಡಲಾಗುವುದು.
– ಎ.ಮಂಜುನಾಥ್ ಶಾಸಕ ವಜ್ರಮಹೋತ್ಸವ ಆಚರಿಸಿಕೊಳ್ಳ ಬೇಕಾದ ಇಂಥ ಪ್ರತಿಷ್ಠಿತ ಸರ್ಕಾರಿ ಪದವಿ ಪೂರ್ವ ಕಾಲೇಜು ನವೀಕರಿಸಿ ವಜ್ರಮಹೋತ್ಸವ ಆಚರಿಸಬೇಕಿದೆ. ಉಸ್ತವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಅವರಲ್ಲಿ ಒತ್ತಡ ಏರಿ ಶಾಸಕರು ಹಣ ಮಂಜೂರು ಮಾಡಿಸಿದ್ದಾರೆ.
– ರಾಮಚಂದ್ರಯ್ಯ,
ನಿವೃತ್ತ ಪ್ರಾಧ್ಯಾಪಕ ದುಸ್ಥಿತಿಯಲ್ಲಿರುವ ಈ ಕಾಲೇಜಿನ ಕಟ್ಟಡವನ್ನು ತೆರವುಗೊಳಿಸಿ ಇಲ್ಲೊಂದು ಜಿಲ್ಲೆಗೆ ಮಾದರಿಯಾದ ಸುಂದರ ಸುಸಜ್ಜಿತವಾದ ಕಾಲೇಜು ನಿರ್ಮಿಸಲು ಶಾಸಕರು ಮುಂದಾಗಿರುವುದಕ್ಕೆ ಮೆಚ್ಚುಗೆವ್ಯಕ್ತಪಡಿಸಿದರು.
– ಪಾನ್ಯಂ ನಟರಾಜು, ಸಾಹಿತಿ – ತಿರುಮಲೆ ಶ್ರೀನಿವಾಸ್