Advertisement
ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಸಂತೋಷನಗರದ ಮುಖ್ಯ ರಸ್ತೆಯಿಂದ ಬುಗುರಿಕಡುವರೆಗೆ ಒಟ್ಟು 2.4 ಕಿ.ಮೀ. ದೂರವಿದ್ದು, ಈ ಪೈಕಿ ಅಂದಾಜು 900 ಮೀ.ವರೆಗೆ ಈವರೆಗೆ ಅಭಿವೃದ್ಧಿಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಈವರೆಗೆ ಅಭಿವೃದ್ಧಿಯಾಗದೆ ನನೆಗುದಿಗೆ ಬಿದ್ದಿದೆ. ಸುಮಾರು 1 ಕಿ.ಮೀ. ಉದ್ದದ ರಸ್ತೆಯ ಡಾಮರೆಲ್ಲ ಕಿತ್ತು ಹೋಗಿದ್ದು, ಮಳೆ ನೀರು ಹೊಂಡ-ಗುಂಡಿಗಳಲ್ಲಿ ನಿಂತು, ರಸ್ತೆಯೇ ಕಾಣದಂತಾಗಿದೆ. ನಿತ್ಯವೂ ಇದೇ ಮಾರ್ಗದಲ್ಲಿ ವಾಹನಗಳಲ್ಲಿ ಸಂಚರಿಸುವ ಜನ ನರಕಯಾತನೆ ಅನುಭವಿಸುವಂತಾಗಿದೆ.
ಸಂತೋಷನಗರ- ಬುಗುರಿಕಡು ರಸ್ತೆಯನ್ನು ಆಶ್ರಯಿಸಿ, ಈ ಪರಿಸರದಲ್ಲಿ 150 ಕ್ಕೂ ಮಿಕ್ಕಿ ಮನೆಗಳಿವೆ. 1,500 ರಿಂದ 1,800ರ ವರೆಗೆ ಜನಸಂಖ್ಯೆಯಿದೆ. ಪ್ರತಿ ನಿತ್ಯ ಹತ್ತಾರು ಶಾಲಾ ವಾಹನಗಳು, ಆಟೋ ರಿಕ್ಷಾ, ಖಾಸಗಿ ವಾಹನಗಳು ಸಂಚರಿಸುತ್ತವೆ. 2 ವರ್ಷಗಳಿಂದ ಸಮಸ್ಯೆ
ಈ ಕಾಸನಾಡಿ ಬೊಬ್ಬರ್ಯ ದೈವಸ್ಥಾನ ಬಳಿಯಿಂದ ಬುಗುರಿಕಡು ಹಾಲಾಡಿ ಬೊಬ್ಬರ್ಯ ದೈವಸ್ಥಾನದ ವರೆಗಿನ ಸುಮಾರು 1 ಕಿ.ಮೀ. ದೂರದ ರಸ್ತೆಗೆ ಮೊದಲ ಬಾರಿಗೆ ಡಾಮರು ಕಾಮಗಾರಿಯಾಗಿದ್ದು ಸುಮಾರು 15 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ಒಂದೇ ಒಂದು ಸಲವೂ ಮರು ಡಾಮರು ಕಾಮಗಾರಿಯೇ ಆಗಿಲ್ಲ. ಆಗಾಗ ರಸ್ತೆಯ ಹೊಂಡ- ಗುಂಡಿಗಳಿಗೆ ತೇಪೆ ಹಾಕಿದ್ದು ಬಿಟ್ಟರೆ, ಈವರೆಗೆ ಬೇರೆ ಯಾವುದೇ ಅಭಿವೃದ್ಧಿಯಾಗಿಲ್ಲ. ಆದರೆ ಕಳೆದ 2 ವರ್ಷದಿಂದ ತೇಪೆ ಕಾರ್ಯವೂ ಆಗಿಲ್ಲ. ಹೊಂಡ-ಗುಂಡಿಮಯ ರಸ್ತೆಯಲ್ಲಿ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ.
Related Articles
ಈ ರಸ್ತೆಯ ಅಭಿವೃದ್ಧಿಗೆ ಟೆಂಡರ್ ಆಗಿದೆ ಅಂತ ಸದಸ್ಯರು ಹೇಳುತ್ತಾರೆ. ಆದರೆ ಕಳೆದೊಂದು ವರ್ಷದಿಂದ ಇದೇ ಮಾತನ್ನು ಹೇಳಿಕೊಂಡು ಬರುತ್ತಿದ್ದಾರೆ. ಈವರೆಗೆ ಯಾವುದೇ ಕಾಮಗಾರಿ ಶುರುವಾಗಿಲ್ಲ. ನಾವು ಮಾತ್ರ ನಿತ್ಯವೂ ಸಂಕಷ್ಟಪಡುವುದು ತಪ್ಪಿಲ್ಲ. ಈಗಲಾದರೂ ಈ ರಸ್ತೆಯ ಅಭಿವೃದ್ಧಿಗೆ ಮುಂದಾಗಲಿ.
– ಎಚ್.ಎ. ಕರೀಂ ಸಾಹೇಬ್, ಹಿರಿಯ ನಾಗರಿಕ
Advertisement
ಮನವಿ ಸಲ್ಲಿಕೆಬುಗುರಿಕಡು ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಹಲವು ಬಾರಿ ಶಾಸಕರಿಗೆ, ತಾ.ಪಂ.ಗೆ ಮನವಿ ಸಲ್ಲಿಸಿದ್ದೇವೆ. ಗ್ರಾಮಸಭೆಯಲ್ಲೂ ನಿರ್ಣಯ ಮಾಡಿ, ಜಿ.ಪಂ.ಗೆ ಕಳುಹಿಸಿದ್ದೇವೆ. ಹೆಚ್ಚಿನ ಅನುದಾನ ಬೇಕಿರುವುದರಿಂದ ವಿಳಂಬವಾಗಿದೆ.
– ಸುಧಾಕರ ದೇವಾಡಿಗ ಕಟ್ಟು, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷರು