Advertisement

Theft Case ಬುಡ್ನಾರು: ಮನೆಗೆ ನುಗ್ಗಿ ಕಳವು; ಆರೋಪಿಯ ಬಂಧನ

12:03 AM May 21, 2024 | Team Udayavani |

ಮಣಿಪಾಲ: ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಸಾವಿರಾರು ರೂ.ಮೌಲ್ಯದ ವಸ್ತುಗಳನ್ನು ಕಳವುಗೈದ ಘಟನೆ ಮೇ 19ರ ತಡರಾತ್ರಿ ನಡೆದಿದೆ.

Advertisement

ಬುಡ್ನಾರು ನಿವಾಸಿ ಯುವರಾಜ್‌ ಅವರ ಮನೆಯ ಹಿಂಬದಿಯ ಪ್ಯಾಸೇಜಿನ ಕಿಟಕಿಯ ಗ್ರೀಲ್‌ ಮತ್ತು ಪ್ಯಾಸೇಜಿನಿಂದ ಒಳಗೆ ಬರುವ ಬಾಗಿಲು ಮುರಿದು ಒಳಪ್ರವೇಶಿಸಿದ್ದ ಕಳ್ಳರು ದೇವರ ಕೋಣೆಯಲ್ಲಿದ್ದ ಎರಡು ಕಾಣಿಕೆ ಡಬ್ಬ ಮತ್ತು ಅದರಲ್ಲಿದ್ದ 23,000 ರೂ. ಮತ್ತು 5 ಗ್ರಾಂ ತೂಕದ ಚಿನ್ನ, ಸಹಿತ ಒಟ್ಟು 48,000 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯ ಬಂಧನ
ಬುಡ್ನಾರಿನನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾಸರಗೋಡಿನ ಮತ್ತತ್ತೋಡಿನ ರಬ್ದಿನ್‌ (50) ಬಂಧಿತ ವ್ಯಕ್ತಿ. ಆತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next