ಹಾಸನ: ಲೋಕಸಭೆಯಲ್ಲಿ ಸಚಿವ ಪಿಯೂಷ್ ಗೋಯಲ್ ಅವರು ಮಂಡಿಸಿದ ಎನ್‌ಡಿಎ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಘೋಷಿಸಿದ ಜನಪ್ರಿಯ ಯೋಜನೆಗಳ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮುಖ್ಯವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಪ್ರೋತ್ಸಾಹಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿ ಮಾಡುವ ಘೋಷಣೆಗೆ ರೈತರಿಂದ ಮೆಚ್ಚುಗೆ ವ್ಯಕ್ತವಾದರೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ರೈತ ಪರವಾದ ಡಾ.ಸ್ವಾಮಿನಾಥನ್ ವರದಿ ಜಾರಿಯ ಬಗ್ಗೆ ಪ್ರಸ್ತಾಪಿಸ ದಿ ರುವುದಕ್ಕೆ ರೈತ ಮುಖಂಡರು ಅಸಮಾ ಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯಂತರ ಬಜೆಟ್: ಪಶುಪಾಲನೆ ಹಾಗೂ ಮೀನು ಗಾರಿಕೆಯ ಸಾಲದ ಬಡ್ಡಿ ವಿನಾಯತಿ ಕ್ರಮಗಳನ್ನು ಸ್ವಾಗತಿಸಿರುವ ಕೃಷಿಕ ವರ್ಗವು ಇದು ಚುನಾ ವಣಾ ಪೂರ್ವದ ಮಧ್ಯಂತರ ಬಜೆಟ್. ಮುಂದೆ ಚುನಾವಣೆ ಮುಗಿದ ನಂತರ ಈ ಘೋಷಣೆಗಳೆಲ್ಲಾ ಜಾರಿಯಾದಾವೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದೆ.
ಆದಾಯ ತೆರಿಗೆ ಮಿತಿ ಹೆಚ್ಚಳ: ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಉದ್ಯೋಗಸ್ಥರು ಹಾಗೂ ವರ್ತಕರ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಹಾಗೆಯೇ ಇಎಸ್‌ಐ ಸೌಲಭ್ಯ ಪಡೆಯಲು ಇದ್ದ 15 ಸಾವಿರ ರೂ. ವೇತನದ ಮಿತಿಯನ್ನು 21 ಸಾವಿರ ರೂ.ಗೆ ಹೆಚ್ಚಳ ಮಾಡುವ ನಿರ್ಧಾರವನ್ನೂ ಕಾರ್ಮಿಕ ವಲಯವು ಸ್ವಾಗತಿಸಿದೆ.
ಅಂಗನವಾಡಿ ಕಾರ್ಯಕರ್ತರ ಹರ್ಷ: ಅಂಗನವಾಡಿ ಕಾರ್ಯ ಕರ್ತೆಯರ ಸಂಭಾವನೆ ಶೇ.50ರಷ್ಟು ಹೆಚ್ಚಳ ಮಾಡಿ ರುವ ಕ್ರಮದ ಬಗ್ಗೆಯೂ ಕಾರ್ಮಿಕ ಸಂಘಟನೆಗಳಿಂದ ಮೆಚ್ಚುಗೆ ವ್ಯಕ್ತ ವಾಗಿದೆ. ಈ ಹೆಚ್ಚಳವನ್ನು ತಕ್ಷಣದಿಂದಲೇ ಜಾರಿ ಮಾಡಬೇಕಾಗಿತ್ತು ಎಂಬ ಅಶಯವನ್ನೂ ಅಂಗನ ವಾಡಿ ಕಾರ್ಯಕತೆ ಯವರು ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಅಭಿವೃದ್ಧಿ ಯೋಜನೆಯಿಲ್ಲ: ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿದ್ದರೂ ಸ್ಥಳೀಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ವಿವರ ಇಲ್ಲ. ರೈಲ್ವೆ ಇಲಾಖೆ ಸೇರಿದಂತೆ ಅಭಿವೃದ್ಧಿಯ ಇಲಾಖೆಗಳ ಹೊಸ ಕಾರ್ಯಕ್ರಮಗಳ ಬಗ್ಗೆಯೂ ವಿವರ ಇಲ್ಲ. ಹಾಗಾಗಿ ಬಜೆಟ್‌ನಲ್ಲಿ ಜಿಲ್ಲೆಗೆ ಏನೇನು ಸಿಕ್ಕಿದೆ ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲವಿದೆ.
* ಎನ್. ನಂಜುಂಡೇಗೌಡ