Advertisement

ಇಂದಿನಿಂದ ಸಂಸತ್‌ನ ಬಜೆಟ್‌ ಅಧಿವೇಶನ

12:17 AM Jan 31, 2022 | Team Udayavani |

ಹೊಸದಿಲ್ಲಿ: ಸೋಮವಾರದಿಂದ ಸಂಸತ್‌ನ ಬಜೆಟ್‌ ಅಧಿವೇಶನ ಆರಂಭವಾಗಲಿದೆ. ಒಟ್ಟು 79 ತಾಸುಗಳ ಅಧಿವೇಶನ ಇದಾಗಿರಲಿದ್ದು, ಅಧಿವೇಶನದ 2ನೇ ದಿನದಂದು (ಮಂಗಳವಾರ )ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ.ಒಟ್ಟು 27 ಸೆಷನ್‌ಗಳಲ್ಲಿ ಅಧಿವೇಶನ ನಡೆಯಲಿದೆ.

Advertisement

ರಾಷ್ಟ್ರಪತಿಗೆ ಧನ್ಯವಾದ ಮತ್ತು ಸಾಮಾನ್ಯ ಬಜೆಟ್‌ನ ಚರ್ಚೆಯು ಅಧಿವೇಶನದ ಮೊದಲಾರ್ಧದ ಪ್ರಮುಖ ಅಂಶವಾಗಲಿದೆ. ಸೋಮವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನುದ್ದೇಶಿಸಿ ಮಾತ ನಾಡಲಿದ್ದಾರೆ.

ಇದನ್ನೂ ಓದಿ:ಸೌದಿ ಅರೇಬಿಯಾದಲ್ಲಿ ಮೊದಲ ಯೋಗಾ ಉತ್ಸವ

ಅಧಿವೇಶನದ ಮೊದಲ ಭಾಗವು ಜ. 31ರಿಂದ ಫೆ.11ರ ವರೆಗೆ ನಡೆಯಲಿದೆ. 2ನೇ ಭಾಗವು ಮಾ. 14ರಿಂದ ಎ. 8ರ ವರೆಗೆ ನಡೆಯಲಿದೆ. ರಾಜ್ಯಸಭೆಯ ಶೂನ್ಯ ಅವಧಿಯನ್ನು ಪ್ರತಿದಿನ 30 ನಿಮಿಷಗಳಿಗೆ ಇಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next