Advertisement

ಬಜೆಟ್‌ ಜನಾಭಿಪ್ರಾಯ

11:57 AM Jul 06, 2018 | Team Udayavani |

ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಯೋಜನೆಗಳನ್ನು ನೀಡದಿರುವುದು ಬೇಸರದ ಸಂಗತಿ. ಹಾಸನ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ನೀಡಿರುವುದು ಸಂತಸ ತಂದಿದೆ.
-ಲಕ್ಷ್ಮೀ, ಗೃಹಿಣಿ

Advertisement

ಮಹಿಳೆಯರು ಆರಂಭಿಸುವ ಉದ್ಯಮ ಕ್ಷೇತ್ರಕ್ಕೆ ಪ್ರಾಶಸ್ತ್ಯ ನೀಡಿಲ್ಲ. ಕೇವಲ ರೈತರ ಸಾಲ ಮ್ನನಾಗೆ ಆದ್ಯತೆ ನೀಡಲಾಗಿದೆ. ಮಹಿಳೆಯರ ಕಲ್ಯಾಣ ಕ್ಷೇತ್ರಕ್ಕೆ ಮೀಸಲಿಟ್ಟ ಹಣ ಕಡಿಮೆಯಾಗಿದೆ.
-ಶ್ರೀದೇವಿ, ಗೃಹಿಣಿ

ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ಆರಂಭಿಸಿರುವುದು ತ್ತಮ ಬೆಳವಣಿಗೆ. ಗರ್ಭೀಣಿಯರು, ಬಾಣಂತಿಯರಿಗೆ ಒಂದು ಸಾವಿರ ರೂ. ನೀಡುವುದು ಕೂಡ ಉತ್ತಮ ಯೋಚನೆ. 
-ಶಾಂತಿ, ಗೃಹಿಣಿ

ವ್ಯಾಪಾರಿಗಳಿಗೆ ಈ ಬಜೆಟ್‌ ಯಾವುದೇ ದೃಷ್ಟಿಯಿಂದಲೂ ಪೂರಕವಾಗಿಲ್ಲ. ಅಸಂಘಟಿತ ವಲಯದ ಕಾರ್ಮಿಕರತ್ತ ಗಮನ ಹರಿಸಿಲ್ಲ. ಸಣ್ಣ, ಬೀದಿ ಬದಿ ವ್ಯಾಪಾರಿಗಳಿಗೆ ಆದ್ಯತೆ ನೀಡಬೇಕಿತ್ತು.
-ನಂಜುಡ, ವ್ಯಾಪಾರಿ

ರೈತರ ಸಾಲ ಮನ್ನಾಗಾಗಿ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಸಿದ್ದು ಸರಿಯಲ್ಲ. ಇದು ಕೇವಲ ರೈತರಿಗಾಗಿ ಮಂಡಿಸಿರುವ ಬಜೆಟ್‌. ರೈತರ ಹೊರತು ಯಾವ ವರ್ಗಕ್ಕೂ ಬಜೆಟ್‌ನಿಂದ ಪ್ರಯೋಜನ ದೊರೆತಿಲ್ಲ.
-ಕುಳ್ಳೇಗೌಡ, ವ್ಯಾಪಾರಿ

Advertisement

ಬಜೆಟ್‌ನಲ್ಲಿ ಮೆಟ್ರೋ ಯೋಜನೆ ಪ್ರಸ್ತಾಪವಿದ್ದರೂ ಸ್ಪಷ್ಟನೆಯಿಲ್ಲ. ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಹಣ ಬೇಕಿತ್ತು. ರಾಸಾಯನಿಕ ತ್ಯಾಜ್ಯ ಶುದ್ಧೀಕರಣ ಘಟಕ ತೆರೆಯಲಿರುವುದು ಉತ್ತಮ ಬೆಳವಣಿಗೆ.
-ರಂಜಿತ್‌, ಖಾಸಗಿ ಉದ್ಯೋಗಿ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಶಿಕ್ಷಣ ಸೇರ್ಪಡೆ ಹಾಗೂ ಹಾಸನದಲ್ಲಿ ಸ್ಯಾನಿಟರಿ ಉಪಕರಣ ಉತ್ಪಾದನೆ ಘಟಕಗಳನ್ನು ತೆರೆಯಲು ನಿರ್ಧರಿಸಿರುವುದು ಸ್ವಾಗತಾರ್ಹ ನಿಲುವುಗಳು.
-ಅಶ್ವಿ‌ನಿ, ವಿದ್ಯಾರ್ಥಿನಿ

ವಿಕಲಚೇತನರು ವಿದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೇತನ ನೀಡುತ್ತಿರುವುದು ಸ್ವಾಗತಾರ್ಹ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಇದನ್ನು ವಿಸ್ತರಿಸಬೇಕಿತ್ತು.
-ಮಹೇಶ್‌, ವಿದ್ಯಾರ್ಥಿ

ಹಳೆಯ ವಿದ್ಯಾರ್ಥಿಗಳ ನೆರವಲ್ಲಿ ಶಾಲೆಗಳ ಅಭಿವೃದ್ಧಿ ಹಾಗೂ ಸಿಎಸ್‌ಆರ್‌ ಅನುದಾನ ಬಳಸಿಕೊಳ್ಳುವುದು ಒಳ್ಳೆಯ ಯೋಚನೆ. ಇದರಿಂದ ಹಲವು ಹಳೆಯ ಶಾಲೆಗಳು ಪುನರುಜ್ಜೀವನಗೊಳ್ಳಲಿವೆ.
-ರವಿಕಿರಣ್‌, ವಿದ್ಯಾರ್ಥಿ

ಕಿದ್ವಾಯಿ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿಗೆ ಪ್ರತ್ಯೇಕ ಘಟಕ, ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿಗಾಗಿ ಬಡರೋಗಿಗಳಿಗೆ ಪ್ರತ್ಯೇಕ ಯೋಜನೆ ಸಿದ್ಧಪಡಿಸುವುದು ಒಳ್ಳೆಯ ನಿರ್ಧಾರ.
-ಟಿ.ಪದ್ಮಾ, ಉಪನ್ಯಾಸಕಿ

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಮುಂದಾಗಿರುವುದಿಂದ ಹಳ್ಳಿಯ ಬಡ ವರ್ಗದ ಮಕ್ಕಳಿಗೂ ಇಂಗ್ಲಿಷ್‌ ಶಿಕ್ಷಣ ದೊರೆಯಲಿದೆ. ಬಾಲ ಸ್ನೇಹಿ ಕೇಂದ್ರಗಳಿಂದಲೂ ಅನುಕೂಲವಾಗಲಿದೆ.
-ಶಿವರಾಜ್‌, ಆಟೋ ಚಾಲಕ

ಕೆಳವರ್ಗಕ್ಕೆ ಆದ್ಯತೆ ನೀಡಿಲ್ಲ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರಿಗೆ ಬಜೆಟ್‌ನಲ್ಲಿ ಹೊಸ ಅಂಶಗಳನ್ನು ಸೇರಿಸಿಲ್ಲ. ಎಲ್ಲವೂ ಹಿಂದಿನಂತೆಯೇ ಇವೆ. ಹಿಂದಿನ ಸರ್ಕಾರದ ಬಜೆಟ್‌ ಚೆನ್ನಾಗಿತ್ತು.
-ಸಿದ್ದು, ಭದ್ರತಾ ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next