Advertisement
ಒಂದೆಡೆ ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಆರ್ಥಿಕ ಅಶಿಸ್ತು ಇತ್ತು ಎಂದು ಸ್ವತಃ ಕಾಂಗ್ರೆಸ್ ಸರಕಾರ ಹೇಳಿದೆ. ಅದನ್ನು ಸರಿದಾರಿಗೆ ತರಬೇಕಿದೆ. ಮತ್ತೂಂದೆಡೆ ಐದೂ ಗ್ಯಾರಂಟಿಗಳಿಗೆ ಮೀಸಲಿಡಬೇಕಾದ ಮೊತ್ತ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ. 40ರಷ್ಟು ಅಂದರೆ 56 ರಿಂದ 58 ಸಾವಿರ ಕೋಟಿ ರೂ.ಗಳಿಗೆ ಏರಿಕೆ ಆಗುವ ಸಾಧ್ಯತೆ ಇದೆ. ಕಳೆದ ಬಾರಿ ಗ್ಯಾರಂಟಿಗೆ ಅಂದಾಜು 35 ಸಾವಿರ ಕೋಟಿ ಮೀಸಲಿಡ ಲಾಗಿತ್ತು. ಇನ್ನೊಂದೆಡೆ ಕುಂಠಿತ ಗೊಂಡ “ಅಭಿವೃದ್ಧಿ ಯಂತ್ರ’ಕ್ಕೆ ವೇಗ ನೀಡಲು ಒಂದಿಷ್ಟು ಹಣ ನೀಡಬೇಕಾಗಿದೆ.
ಈ ಸಂಬಂಧ “ಉದಯವಾಣಿ’ ಜತೆಗೆ ಮುಕ್ತ ವಾಗಿ ಮಾತನಾಡಿದ ಅವರು, “ಈ ಸವಾಲು ಎದುರಿಸಲು ಸರಕಾರ ಕೂಡ ಮಾನಸಿಕವಾಗಿ ಸಿದ್ಧವಾಗುತ್ತಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ನಮ್ಮ ಮುಂದೆ ಸಾಕಷ್ಟು ದಾರಿಗಳಿವೆ. ಅದಕ್ಕೆ ಮನಸ್ಸು ಮಾಡಬೇಕಷ್ಟೇ. ಉದಾಹರಣೆಗೆ ಈಗಲೂ ಅನೇಕ ಅಂಗಡಿಗಳಲ್ಲಿ ಗ್ರಾಹಕರಿಗೆ ಸಮರ್ಪಕ ಬಿಲ್ ನೀಡುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಿದರೆ, ರಾಜ್ಯದಲ್ಲಿ ಕನಿಷ್ಠ 10 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಹೆಚ್ಚಲಿದೆ ಎಂಬುದು ನನ್ನ ಅಂದಾಜು. ಜತೆಗೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ಪೆಟ್ರೋಲ್-ಡೀಸೆಲ್ ಬೆಲೆ ನಮ್ಮಲ್ಲಿ ಕಡಿಮೆ ಇದೆ. ಹಾಗಾಗಿ, ಗಡಿಭಾಗಗಳಲ್ಲಿ ನೆರೆಯ ರಾಜ್ಯಗಳಿಂದ ಸಾಕಷ್ಟು ಪೆಟ್ರೋಲ್-ಡೀಸೆಲ್ ತುಂಬಿಸಿಕೊಂಡು ಹೋಗಲಾಗುತ್ತಿದೆ. ಇದಕ್ಕೆ ನಿಯಂತ್ರಣ ಹಾಕುವುದು. ನಗರಗಳ ಅಕ್ರಮ ಆಸ್ತಿಗಳನ್ನು ಸಕ್ರಮ ಗೊ ಳಿಸುವುದು, ನಗರಪ್ರದೇಶಗಳ ಆಸ್ತಿಗಳ ಮರುಸಮೀಕ್ಷೆ, ಗಣಿ ಮತ್ತು ಭೂವಿಜ್ಞಾನದಲ್ಲಿ ರಾಜಸ್ವ ಸಂಗ್ರಹದಂಥ ಹಲವು ಮಾರ್ಗಗಳಿವೆ. ಇದೆಲ್ಲವೂ ಸಾಧ್ಯವಾದರೆ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಂಪನ್ಮೂಲ ಹರಿದುಬರಲಿದೆ ಎಂದರು.