Advertisement
ಆರ್ಥಿಕ ತಜ್ಞರು ಮಾತ್ರವಲ್ಲದೇ, ವಿವಿಧ ವಲಯದ ತಜ್ಞರು, ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಸದಸ್ಯರೂ ಈ ಸಭೆಯಲ್ಲಿ ಪಾಲ್ಗೊಂಡರು, ತಮ್ಮ ಸಲಹೆಗಳನ್ನು ನೀಡಿದರು ಎನ್ನಲಾಗಿದೆ. ಉದ್ಯೋಗ ಸೃಷ್ಟಿ ಕೂಡ ಈ ಸಭೆಯ ಪ್ರಮುಖ ಅಜೆಂಡಾ ಆಗಿತ್ತು ಎಂದು ಮೂಲಗಳು ತಿಳಿಸಿವೆ. ಜು.23ರಂದು ಮಂಡನೆಯಾಗಲಿರುವ ಬಜೆಟ್, ಮೋದಿ 3.0 ಸರಕಾರದ ಮೊದಲ ಬಜೆಟ್ ಆಗಿದ್ದು, 2047ರ ವಿಕಸಿತ ಭಾರತದ ಗುರಿ ಸಾಧನೆಗೆ ಪ್ರಮುಖವಾಗಿರಲಿದೆ ಎನ್ನಲಾಗಿದೆ. ಈ ಸಭೆಗೂ ಮೊದಲು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ವಿವಿಧ ವಲಯಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಸಾಮಾನ್ಯರಿಗೆ ಹೊರೆಯಾಗಿರುವ ತೆರಿಗೆ ವಿನಾಯಿತಿ ನೀಡುವುದು ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕೃತಕ ಬುದ್ಧಿಮತ್ತೆ(ಎಐ) ಪ್ರೇರಿತ ಉದ್ಯೋಗ ನಷ್ಟದ ಮೇಲೆ ರೋಬೋಟ್ ತೆರಿಗೆ ವಿಧಿಸಬೇಕೆಂದು ಆರ್‌ಎಸ್‌ಎಸ್ ಸಂಬಂಧಿ ಸಂಸ್ಥೆ ಸ್ವದೇಶಿ ಜಾಗರಣ ಮಂಚ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿನಂತಿ ಮಾಡಿದೆ. ಈ ರೋಬೋಟ್ ತೆರಿಗೆಯನ್ನು ಉದ್ಯೋಗವನ್ನು ಕಳೆದುಕೊಳ್ಳುವ ಕಾರ್ಮಿಕರ ಉನ್ನತಿಗೆ ಬಳಸಬಹುದು ಎಂದಿದೆ.