ಈ ಅನುದಾನದಲ್ಲಿ 2,286 ಕೋಟಿ ರೂ.ಗಳನ್ನು ಹೊಸ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ ರೈಲು ಮಾರ್ಗಗಳಿಗೆ, 1,531 ಕೋಟಿ ರೂ.ಗಳನ್ನು ರೈಲು ಜೋಡಿ ಮಾರ್ಗ ಕಾಮಗಾರಿಗೆ ಹಾಗೂ 987 ಕೋಟಿ ರೂ.ಗಳನ್ನು ಪ್ರಯಾಣಿಕರಿಗೆ ವಿವಿಧ ಸೌಲಭ್ಯ- ಸೇವೆ ಒದಗಿಸಲು ಹಂಚಿಕೆ ಮಾಡಲಾಗಿದೆ. ಇದರ ಹೊರತಾಗಿ ಬಜೆಟ್‌ನಲ್ಲಿ ಯಾವುದೇ ಹೊಸ ರೈಲನ್ನು ಪ್ರಕಟಿಸಿಲ್ಲ. ಈಗಾಗಲೇ ಘೋಷಣೆಯಾ ಗಿರುವ ಯೋಜ ನೆ ಗಳನ್ನು ಪೂರ್ಣಗೊಳಿಸುವುದು ಮತ್ತು ಯೋಜನೆಗಳನ್ನು ತ್ವರಿತಗೊಳಿಸುವುದು ಆಗಿದೆ.
Advertisement
ನೈಋತ್ಯ ರೈಲ್ವೆ ವಲಯದಡಿ ಹೊಸ ಹಾಗೂ ಪ್ರಗತಿಯ ಲ್ಲಿರುವ ರೈಲು ಮಾರ್ಗ ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾ ಗಿದೆ. ಗದಗ(ತಳಕಲ್ಲ)ವಾಡಿ ರೈಲ್ವೆ ಮಾರ್ಗ ಯೊಜನೆಗೆ 380 ಕೋಟಿ ರೂ. ನಿಗದಿಪಡಿಸಲಾಗಿದೆ. ಗಿಣಗೇರಾ- ರಾಯ ಚೂರು- 300 ಕೋಟಿ ರೂ., ತುಮಕೂರು- ದಾವಣಗೆರೆ(ವಯಾ ಚಿತ್ರದುರ್ಗ) 300ಕೋಟಿ ರೂ., ತುಮಕೂರು- ರಾಯದುರ್ಗ(ವಯಾ ಕಲ್ಯಾಣದುರ್ಗ) 250 ಕೋಟಿ ರೂ., ಬಾಗಲಕೋಟೆ -ಕುಡಚಿ 410 ಕೋಟಿ ರೂ., ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು 200 ಕೋಟಿ ರೂ., ಬೆಳಗಾವಿ- ಧಾರವಾಡ (ವಯಾ ಕಿತ್ತೂರು)- 50 ಕೋಟಿ ರೂ., ಕಡೂರು – ಚಿಕ್ಕಮಗಳೂರು-ಹಾಸನ 160 ಕೋಟಿ ರೂ., ಮಂಗಳೂರು-ಪಾಲಸಮುದ್ರಂ-20 ಕೋಟಿ ರೂ., ಹಾಸನ-ಬೇಲೂರು-5 ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗಿದೆ. ಇದಲ್ಲದೆ ನೆರೆಯ ರಾಜ್ಯದ ಮರಿಕುಪ್ಪಂ- ಕುಪ್ಪಂ ಯೋಜನೆಗೆ 170 ಕೋಟಿ ರೂ.ಗಳನ್ನು ನೀಡಲಾಗಿದೆ.ಜೋಡು ರೈಲು ಮಾರ್ಗ ನಿರ್ಮಾಣ ಯೋಜನೆಯಡಿ ಗದಗ-ಹೋಟಗಿ 197 ಕೋಟಿ ರೂ., ಬೈಯಪ್ಪನಹಳ್ಳಿ- ಹೊಸೂರು 150 ಕೋಟಿ ರೂ., ಯಶವಂತ ಪುರ- ಚನ್ನಸಂದ್ರ 150 ಕೋಟಿ ರೂ., ಹುಬ್ಬಳ್ಳಿ- ಚಿಕ್ಕಜಾಜೂರು 94 ಕೋಟಿ ರೂ., ಬೆಂಗ ಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ ಕ್ವಾರ್ಡು ಪ್ಲಿಂಗ್ 260 ಕೋಟಿ ರೂ., ಹೊಸಪೇಟೆ-ತಿನೈಘಟ್-ವಾಸ್ಕೋ ಡ ಗಾಮಾ 400 ಕೋಟಿ ರೂ.ಗಳನ್ನು ನಿಗದಿಪಡಿ ಸಲಾಗಿದೆ. ಇದಲ್ಲದೆ, ನೈಋತ್ಯ ರೈಲ್ವೆ ವಲಯ ವ್ಯಾಪ್ತಿಗೆ ಬರುವ ನೆರೆಯ ರಾಜ್ಯಗಳ ರೈಲ್ವೆ ಮಾರ್ಗಗಳಾದ ಪೆನುಕೊಂಡ- ಧರ್ಮಾವರಂ 180.4 ಕೋಟಿ ರೂ., ಲೋಂಡಾ-ಮೀರಜ್-200 ಕೋಟಿ ರೂ., ಹೊಸೂರು- ಒಮಲೂರು-100.1 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಮಾರ್ಗದ ಕೆಳ, ಮೇಲ್ಸೇ ತುವೆಗಳ ನಿರ್ಮಾಣ ಹಾಗೂ ಸಂಬಂಧಿತ ಕಾಮಗಾರಿಗಳಿಗೆ 341 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ರೈಲು ಸಂಚಾರದ ವಿವಿಧ ಸೌಲಭ್ಯಗಳಿಗಾಗಿ 126.11 ಕೋಟಿ ರೂ.ಗಳನ್ನು ನಿಗದಿಪಡಿಸ ಲಾಗಿದೆ. ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರೈಲ್ವೆಯ ಹೊಸ ಮಾರ್ಗಗಳ ಸಮೀಕ್ಷೆ, ಜೋಡು ಮಾರ್ಗ ಯೋಜನೆಗಳಿಗೆ 22 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
Related Articles
ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂಬರುವ ದಿನಗಳಲ್ಲಿ ಸಾಮಾನ್ಯ ರೈಲ್ವೆ ಬೋಗಿಗಳೂ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡ “ವಂದೇ ಭಾರತ್’ ರೈಲುಗಳಾಗಿ ಪರಿವರ್ತನೆ ಆಗಲಿವೆ. ಅಷ್ಟೇ ಅಲ್ಲ, ಕೆಲವೇ ವರ್ಗ ಗಳಿಗೆ ಸೀಮಿತವಾ ಗಿರುವ ಅವುಗಳ ಸೇವೆ ಸಾಮಾನ್ಯ ವರ್ಗಗಳಿಗೂ ಕೈಗೆಟಕು ವಂತಾಗಲಿದೆ.
ಹೌದು, ದೇಶದ 40 ಸಾವಿರ ಸಾಮಾನ್ಯ ರೈಲ್ವೆ ಬೋಗಿಗಳನ್ನು ಈಗ ಕೇಂದ್ರ ಸರ್ಕಾರ ಹೈಟೆಕ್ ಸೌಲಭ್ಯವುಳ್ಳ “ವಂದೇ ಭಾರತ್’ ರೈಲು ಬೋಗಿಗಳಾಗಿ ಪರಿವರ್ತಿಸಲು ಮುಂದಾಗಿದೆ. ಇದರ ಜತೆಗೆ ಮೂರು ಆರ್ಥಿಕ ರೈಲ್ವೆ ಕಾರಿಡಾರ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದರಿಂದ ರೈಲ್ವೆ ಸಂಚಾರದಟ್ಟಣೆಗೂ ಮುಕ್ತಿ ಸಿಗಲಿದೆ. ಇದನ್ನು ಸ್ವತಃ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ಈ ಭಾರಿ ಸಂಖ್ಯೆಯಲ್ಲಿ ಬೋಗಿಗಳ ಪರಿವರ್ತನೆಯಿಂದ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವುದರ ಜತೆಗೆ ಸಾರ್ವಜನಿಕರಿಗೆ ಪ್ರಯಾಣದ ಅವಧಿ ಕೂಡ ತಗ್ಗಲಿದೆ. ಅಲ್ಲದೆ, ವಿಶೇಷವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಪೂರಕವಾಗಲಿದೆ. ಇನ್ನು ಸಾಮಾನ್ಯ ಬೋಗಿಗಳನ್ನು “ವಂದೇ ಭಾರತ್’ಗೆ ಪರಿವರ್ತನೆ ಮಾಡುವುದರಿಂದ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಿಗೆ ನೆರವಾಗಲಿದೆ.
Advertisement