Advertisement
ಹಾಗೆಂದು ಇದು ಭಾರೀ ಸಂಭ್ರಮಿಸುವ ವಿಚಾರವೂ ಅಲ್ಲ. ಪ್ರಸ್ತುತ ಪ್ರಯಾಣ ಮತ್ತು ವೈದ್ಯಕೀಯ ಭತ್ತೆ ಇರುವವರಿಗೆ ಕರ ವಿನಾಯಿತಿ ಸಿಗುತ್ತಿದೆ. ತಿಂಗಳಿಗೆ 1,600 ರೂ.ಯಂತೆ ಪ್ರಯಾಣ ಭತ್ತೆ ಹಾಗೂ ವರ್ಷಕ್ಕೆ 15,000 ರೂ. ವೈದ್ಯಕೀಯ ವೆಚ್ಚವನ್ನು ತೋರಿಸಿ ವಿನಾಯಿತಿ ಪಡೆದುಕೊಳ್ಳಬಹುದಿತ್ತು. ಇದು ಒಟ್ಟು 34,200 ರೂ. ಆಗುತ್ತದೆ. ಜನರಿಗೆ ಹೆಚ್ಚುವರಿ ಲಾಭವಾಗಿರುವುದು 5800 ರೂ. ಮಾತ್ರ. ಆದರೆ ಈಗ ಸ್ಟ್ಯಾಂಡರ್ಡ್ ಡಿಡಕ್ಷನ್ ಮಾಡಿರುವುದರಿಂದ ವೈದ್ಯಕೀಯ ಬಿಲ್‌ಗಳನ್ನೆಲ್ಲ ಸಂಗ್ರಹಿಸಿಟ್ಟುಕೊಂಡು ತೆರಿಗೆ ರಿಟರ್ನ್ಸ್ ಸಲ್ಲಿಸುವ ವೇಳೆ ತೋರಿಸುವ ತಲೆಬಿಸಿ ಇಲ್ಲ. ವೇತನದಾರರೆಲ್ಲ ಈ ವಿನಾಯಿತಿ ಪಡೆದುಕೊಳ್ಳಬಹುದು. ಬಹುತೇಕ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ 2.5 ಕೋಟಿ ವೇತನದಾರರಿಗೆ ಪ್ರಯೋಜನವಾಗುವ ಕೊಡುಗೆಯಿದು. ಇದರಿಂದ ಕೇಂದ್ರ ಸರಕಾರಕ್ಕೆ 8 ಸಾವಿರ ಕೋಟಿ ರೂ. ಆದಾಯ ಕಡಿಮೆಯಾಗಲಿದೆ.
ವೇತನದಾರರಿಂದಲೇ ಹೆಚ್ಚು ತೆರಿಗೆ
2016-17ನೇ ಸಾಲಿನಲ್ಲಿ 1.89 ಕೋಟಿ ವೇತನದಾರರು ಒಟ್ಟು 1.44 ಲಕ್ಷ ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಅಂದರೆ ಸರಾಸರಿಯಾಗಿ ಒಬ್ಬ ವೇತನದಾರ 76,306 ರೂ. ಆದಾಯ ತೆರಿಗೆ ಪಾವತಿಸಿದಂತಾಯಿತು. ಇದೇ ವೇಳೆ ವ್ಯಾಪಾರ ವಹಿವಾಟು ಮಾಡುವ ಉದ್ಯಮಿಗಳು ಪಾವತಿಸಿರುವ ತೆರಿಗೆ ಬರೀ 48,000 ಕೋಟಿ ರೂ.ಒಟ್ಟಾರೆ 1.88 ಕೋಟಿ ಉದ್ಯಮಿಗಳು ಆದಾಯ ತೆರಿಗೆ ಪಾವತಿಸಿದ್ದಾರೆ. ಅಂದರೆ ಪ್ರತಿ ಉದ್ಯಮಿ ಕೇವಲ 25,753 ರೂ. ತೆರಿಗೆ ಪಾವತಿಸಿದಂತಾಯಿತು.
ಹಿರಿಯರಿಗೆ ವಿನಾಯಿತಿ
ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲೆ ಸಿಗುವ ಬಡ್ಡಿ ದರಕ್ಕೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 10,000ದಿಂದ 50,000 ರೂ.ವರೆಗೆ ಏರಿಸಲಾಗಿದೆ. ಇವರಿಗೆ ಟಿಡಿಎಸ್ ನಿಯಮಗಳ 194ಎ ಪರಿಚ್ಛೇದದ ಅಡಿಯಲ್ಲಿ ಬರುವ ತೆರಿಗೆಗಳಿಂದ ವಿನಾಯಿತಿ ನೀಡಲಾಗಿದೆ. ಆರೋಗ್ಯ ವಿಮೆಯ ಪ್ರೀಮಿಯಂಗಳ ಮೇಲಿನ 80ಡಿ ಮಾದರಿಯ ತೆರಿಗೆ ಮಿತಿಯನ್ನು 30ರಿಂದ 50 ಸಾವಿರ ರೂ.ವರೆಗೆ ಹೆಚ್ಚಿಸಲಾಗಿದೆ.
Related Articles
Advertisement
ಪ್ರಧಾನ ಮಂತ್ರಿ ವಾಸ ವಂದನ ಯೋಜನೆಯನ್ನು 2020ರ ಮಾರ್ಚ್‌ವರೆಗೆ ಮುಂದುವರಿಸಲು ನಿರ್ಧಾರ. ಹಿರಿಯ ನಾಗರಿಕರ ಹೂಡಿಕೆ ಮಿತಿಯನ್ನು ಈಗಿರುವ 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ.ವರೆಗೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.