Advertisement

ಆಯವ್ಯಯ: ರಸ್ತೆಗಳ ನಿರ್ಮಾಣಕ್ಕಾಗಿ 126 ಕೋಟಿ

12:28 PM Mar 25, 2017 | Team Udayavani |

ಮೈಸೂರು: ಪಾರಂಪರಿಕ ನಗರ ಘೋಷಣೆಗೆ ಪ್ರಸ್ತಾವನೆ ಗುಂಡಿ ಮುಕ್ತ ರಸ್ತೆ. ಹಂದಿ ಮುಕ್ತ ನಗರಕ್ಕೆ ಒತ್ತು. ಪಾಲಿಕೆ ಮುಖ್ಯ ಕಚೇರಿಗೆ ಲಂಡನ್‌ ಸಿಟಿ ಕಾರ್ಪೋರೇಷನ್‌ ಮಾದರಿಯಲ್ಲಿ ಶಾಶ್ವತ ವಿದ್ಯುದ್ದೀಪಾಲಂಕಾರ. ಕೆರೆ ಅಭಿವೃದ್ಧಿ. ಪೇಪರ್‌ ಲೆಸ್‌ ಆಫೀಸ್‌. ಇ-ಶೌಚಾಲಯಗಳ ನಿರ್ಮಾಣ. ಇವು ಮೈಸೂರು ಮಹಾ ನಗರಪಾಲಿಕೆಯ 2017-18ನೇ ಸಾಲಿನ ಆಯವ್ಯಯದ ಪ್ರಮುಖಾಂಶಗಳು. 

Advertisement

ಮೇಯರ್‌ ಎಂ.ಜೆ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪಾಲಿಕೆ ಕೌನ್ಸೆಲ್‌ ಸಭೆಯಲ್ಲಿ ತೆರಿಗೆ ನಿರ್ಧರಣಾ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ್‌ ಈ ಸಾಲಿನ ಆಯವ್ಯಯ ಮಂಡಿಸಿದರು.

ಗುಂಡಿಮುಕ್ತ ರಸ್ತೆ: ನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರಸ್ತೆಗಳು ಗುಂಡಿ ಬೀಳದಂತೆ ಹಾಗೂ ಇದರಿಂದ ನಾಗರಿಕರಿಗೆ ಆಗುವ ತೊಂದರೆ ತಪ್ಪಿಸಲು ವೈಜಾnನಿಕವಾಗಿ ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕ ಉತ್ತಮ ರಸ್ತೆಗಳನ್ನು ನಾಗರಿಕರ ಸಂಚಾರಕ್ಕೆ ಒದಗಿಸಲು ರಸ್ತೆ ದುರಸ್ತಿ ಮತ್ತು ಮರು ಡಾಂಬರೀ ಕರಣ ಕಾಮಗಾರಿಗಳಿಗಾಗಿ ಪಾಲಿಕೆ ನಿಧಿ ಹಾಗೂ ವಿವಿಧ ಅನುದಾನಗಳು ಸೇರಿದಂತೆ 26 ಕೋಟಿ ರೂ. ಕಾಯ್ದಿರಿಸಲಾಗಿದ್ದು, ಈ ಬಾಬಿ¤ನಲ್ಲಿ ಹೊಸ ರಸ್ತೆಗಳ ನಿರ್ಮಾಣಕ್ಕಾಗಿ 126 ಕೋಟಿ ಕಾಯ್ದಿರಿಸಲಾಗಿದೆ.

ಒಟ್ಟಾರೆ ರಸ್ತೆಗಳ ಅಭಿವೃದ್ಧಿಗಾಗಿ 153 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ. ನಗರವನ್ನು ಹಂದಿಗಳ ಮುಕ್ತವನ್ನಾಗಿಸಲು ಹಂಚ್ಯಾ ಸ.ನಂ.242ರಲ್ಲಿನ ಎರಡೂವರೆ ಎಕರೆ ಜಮೀನಿಗೆ ಕಾಂಪೌಂಡ್‌ ನಿರ್ಮಿಸಿ, ನಗರದ ಒಳಭಾಗ ದಲ್ಲಿರುವ ಹಂದಿಗಳನ್ನು ಸ್ಥಳಾಂತರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಶೇ.24.10 ನಿಧಿಯಡಿ 50 ಲಕ್ಷ ರೂ. ಮೀಸಲಿಡಲಾಗಿದೆ.

ನಗರವನ್ನು ಪಾರಂಪರಿಕ ನಗರವೆಂದು ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸಿ, ಸಂಬಂಧಿಸಿದ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೋರಲಾಗುವುದು. ಪಾರಂಪರಿಕ ಶೈಲಿಯಲ್ಲಿರುವ ಪಾಲಿಕೆ ಮುಖ್ಯ ಕಚೇರಿ ಕಟ್ಟಡಕ್ಕೆ ಲಂಡನ್‌ನ ಚಾರ್ಟರ್‌ ಸಿಟಿ ಕಾರ್ಪೊàರೇಷನ್‌ ಮಾದರಿಯಲ್ಲಿ ಇಲ್ಯೂಮಿನೇಟೆಡ್‌ ವಿದ್ಯುತ್‌ ದೀಪಗಳನ್ನು ಶಾಶ್ವತವಾಗಿ ಅಳವಡಿಸಿ, ದಸರಾ ಹಾಗೂ ನಾಡಹಬ್ಬಗಳ ಸಂದರ್ಭದಲ್ಲಿ ಬೆಳಗಿಸಲು 25 ಕೋಟಿ ಅಂದಾಜು ವೆಚ್ಚ ತಗುಲಲಿದ್ದು, ಈ ಸಾಲಿನಲ್ಲಿ ಪಾಲಿಕೆಗೆ ಬಿಡುಗಡೆಯಾಗುವ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.

Advertisement

60-40 ಅಡಿ ವಿಸ್ತೀರ್ಣದ ನಿವೇಶನಗಳಲ್ಲಿ ಮನೆ ಕಟ್ಟಿಸುವವರು ಕಡ್ಡಾಯವಾಗಿ ಮಳೆ ನೀರು ಕೊಯ್ಲು ಘಟಕ ಸ್ಥಾಪನೆ ಮಾಡಬೇಕೆಂಬ ಕಾರ್ಯ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕ್ರಮದ ಜತೆಗೆ ಪಾಲಿಕೆಯ ಕಟ್ಟಡಗಳಿಗೆ ಅನುದಾನ ಲಭ್ಯತೆಯ ಅನುಸಾರ ಈ ಯೋಜನೆ ಅಳವಡಿಸಿ ಅಂತರ್ಜಲ ವೃದ್ಧಿಗೆ ಪ್ರಯತ್ನಿಸಲಾಗುವುದು. ನಗರದ ಉದ್ಯಾನಗಳಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ವಿವಿಧ ಮಾದರಿಯ ಗಿಡಗಳ ನೆಡಲು ಕ್ರಮ ಸೇರಿದಂತೆ ಉದ್ಯಾನಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 20 ಕೋಟಿ ಮೀಸಲಿಡಲಾಗಿದೆ.

ಪೌರಕಾರ್ಮಿಕರಿಗೆ ಆರೋಗ್ಯಭಾಗ್ಯ ಕಾರ್ಯಕ್ರಮದಡಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಶೇ.24.10 ಅನುದಾನದಲ್ಲಿ 5 ಲಕ್ಷ ರೂ. ಮೊತ್ತದ ಅಪಘಾತ ವಿಮೆ ಮಾಡಿಸಿ, ಪಾಲಿಕೆಯೇ ಪ್ರೀಮಿಯಂ ಹಣ ಭರಿಸುವುದು. ಇದರಿಂದ ಪೌರಕಾರ್ಮಿಕರಿಗೆ 4 ಲಕ್ಷ ರೂ.ಗಳ ರಿಸ್ಕ್ ಕವರೇಜ್‌ ನೊಂದಿಗೆ 1 ಲಕ್ಷ ರೂ.ಗಳವರೆಗೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾಗಿದೆ. 

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸಮಾಡಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಮೊತ್ತದವನ್ನು 3 ಸಾವಿರ ದಿಂದ 5 ಸಾವಿರ ರೂ, 8 ಸಾವಿರ ದಿಂದ 10 ಸಾವಿರ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 15 ಲಕ್ಷ ರೂ. ಕಾಯ್ದಿರಿಸಲಾಗಿದೆ. ನಗರದ ಪ್ರತಿಷ್ಠಿತ ಅಶೋಕ ರಸ್ತೆಯಲ್ಲಿ ಚಾಮರಾಜ ವೃತ್ತದಿಂದ ನೆಹರು ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಪಾರಂಪರಿಕ ವಿದ್ಯುತ್‌ ಕಂಬಗಳನ್ನು ಅಳವಡಿಸಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುವುದು.

ಜತೆಗೆ ನಗರದಾದ್ಯಂತ ಇರುವ ಟ್ಯೂಬ್‌ಲೈಟ್‌ ಮತ್ತು ಸೋಡಿಯಂ ದೀಪಗಳನ್ನು ಬದಲಿಸಿ ಎಲ್‌ಇಡಿ ದೀಪಗಳನ್ನು ಅಳವಡಿಸಲು 14 ಕೋಟಿ ಕಾಯ್ದಿರಿಸಲಾಗಿದೆ. ನಗರದಲ್ಲಿ ಅಗತ್ಯವಿರುವೆಡೆ ಒಳಚರಂಡಿ ಕಾಮಗಾರಿಗಳಿಗಾಗಿ ಪಾಲಿಕೆ ನಿಧಿಯಿಂದ 56 ಕೋಟಿ ಕಾಯ್ದಿರಿಸಲಾಗಿದೆ. ಪಾಲಿಕೆ ಮುಂಭಾಗದ ಬಿ.ರಾಚಯ್ಯ ವೃತ್ತದಲ್ಲಿ ಪಾರಂಪರಿಕ ವಿದ್ಯುತ್‌ ದೀಪಗಳನ್ನು ಅಳವಡಿಸಲು ಎಸ್‌ಎಫ್ಸಿ ಅನುದಾನದಲ್ಲಿ 10 ಲಕ್ಷ ರೂ. ಕಾಯ್ದಿರಿಸಲಾಗಿದೆ.

ನಲ್ಮ್ ಯೋಜನೆಯಡಿ ಯುವಜನರಿಗೆ ವಿವಿಧ ತರಬೇತಿಗಳನ್ನು ನೀಡಿ, ಉದ್ಯೋಗ ಕಲ್ಪಿಸುವ ಉದ್ದೇಶಕ್ಕಾಗಿ 10 ಕೋಟಿ ನಿಗದಿಪಡಿಸಲಾಗಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮದ ಜತೆಗೆ ರಾಯನಕೆರೆ ಹುಂಡಿಯಲ್ಲಿ 5 ಎಕರೆ ಪ್ರದೇಶದಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ಸ್ಥಾಪಿಸಲು 60 ಲಕ್ಷ ರೂ. ಮೀಸಲಿಡಲಾಗಿದೆ. 

ನಗರದಲ್ಲಿ ಅಡ್ಡಾಡುವ ಬಿಡಾಡಿ ದನಗಳು ಹಾಗೂ ಅಪಘಾತಕ್ಕೆ ಒಳಗಾದ ಪ್ರಾಣಿಗಳನ್ನು ಸಾಗಿಸಲು ಅತ್ಯಾಧುನಿಕ ವಾಹನ ಖರೀದಿಗೆ 15 ಲಕ್ಷ ಮೀಸಲು. ನಗರಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಸುಮಾರು 15 ಟನ್‌ ಪ್ರಾಣಿಜನ್ಯ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಈ ತ್ಯಾಜ್ಯವನ್ನು ಕಾಂಪೋಸ್ಟ್‌ ಮಾಡಿ ಬಯೋ ಗ್ಯಾಸ್‌ ಉತ್ಪ$ತ್ತಿ ಮಾಡಲು 60 ಲಕ್ಷ ಮೀಸಲಿಡಲಾಗಿದೆ.

ಘನತ್ಯಾಜ್ಯ ವಸ್ತು ನಿರ್ವಹಣೆ: ಸತತ ಎರಡು ಬಾರಿ ದೇಶದ ಪ್ರಥಮ ಸ್ವತ್ಛ ನಗರಿ ಎಂದು ಪ್ರಶಸ್ತಿಗಳಿಸಿ ಪ್ರಸಿದ್ಧಿಯಾಗಿರುವ ಹಿನ್ನೆಲೆ ಘನತ್ಯಾಜ್ಯವಸ್ತುಗಳ ನಿರ್ವಹಣೆಗಾಗಿ ಆಯವ್ಯಯದಲ್ಲಿ 72 ಕೋಟಿ ಅನುದಾನ ವಿವಿಧ ಮೂಲಗಳಿಂದ ಕಾಯ್ದಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next