Advertisement

ಬುದ್ಧ ವಿಹಾರದಲ್ಲಿ ಬುದ್ಧ ಪೌರ್ಣಿಮೆ ಆಚರಣೆ

02:28 PM Dec 20, 2021 | Team Udayavani |

ಸುರಪುರ: ನಗರದ ಬುದ್ಧ ವಿಹಾರದಲ್ಲಿ ವರಜ್ಯೋತಿ ಭಂತೇಜಿ ಸಾನ್ನಿಧ್ಯದಲ್ಲಿ ಬುದ್ಧ ಅನುಯಾಯಿಗಳು ಭಾನುವಾರ ಶ್ರದ್ಧಾ ಭಕ್ತಿಯಿಂದ ಬುದ್ಧ ಪೌರ್ಣಿಮೆ ಆಚರಿಸಿದರು.

Advertisement

ಗೌತಮ ಬುದ್ಧನ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಪಂಚಶೀಲ ತಿಸರಣ ಪಠಿಸಿ ವಿಶೇಷ ಪ್ರಾರ್ಥನೆ ಮಾಡಿದರು. ಸಾನ್ನಿಧ್ಯ ವಹಿಸಿದ್ದ ವರಜ್ಯೋತಿ ಭಂತೇಜಿ ಸಂದೇಶ ನೀಡಿ, ಬುದ್ಧ ಧರ್ಮದಲ್ಲಿ ಪ್ರತಿಯೊಬ್ಬರು ನಂಬಿಕೆ, ವಿಶ್ವಾಸವಿಡಬೇಕು ಎಂದು ಸಲಹೆ ನೀಡಿದರು.

ಪ್ರಮುಖರಾದ ವೆಂಕಟೇಶ ಹೊಸ್ಮನಿ, ನಾಗಣ್ಣ ಕಲ್ಲದೇವನಳ್ಳಿ, ಭೀಮರಾಯ ಸಿಂಧಗೇರಿ, ರಾಹುಲ ಹುಲಿಮನಿ, ಮಾಳಪ್ಪ ಕಿರದಳ್ಳಿ, ಜಿ.ಆರ್‌. ಬನ್ನಾಳ, ರಮೇಶ ಅರಿಕೇರಿ, ಶ್ರೀಮಂತ ಚಲುವಾದಿ ಸೇರಿದಂತೆ ಮಹಿಳೆಯರು, ಮಕ್ಕಳು, ಅಂಬೇಡ್ಕರ್‌ ಅಭಿಮಾನಿಗಳು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next