ಬಳ್ಳಾರಿ: ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಸರ್ಶೆವಟ್ಟಿ ಮಾರುತಿ ಪ್ರಸಾದ್ ಅವರು ಸೋಮವಾರ ರಾತ್ರಿ ಅಧಿಕಾರ ಸ್ವೀಕರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಮುರಹರಿಗೌಡ, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಸಮ್ಮುಖದಲ್ಲಿ ಇಲಾಖೆಯ ದಾಖಲೆಗಳ ಮೇಲೆ ಸಹಿ ಮಾಡುವ ಮೂಲ ಅಧಿಕಾರ ಸ್ವೀಕರಿಸಿದರು.
ಬಳಿಕ ಸುದ್ದಿಗಾಋಒಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಇತಿಹಾಸದಲ್ಲೇ ವೈಶ್ಯ ಸಮುದಾಯಕ್ಕೆ ಬುಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತೇನೆ ಎಂದರು.
ಜಮೀನು, ನಿವೇಶನಗಳ ನಕ್ಷೆಗಾಗಿ ಬುಡಾ ಕಚೇರಿಗೆ ಬರುವ ಹಿರಿಯರು, ವೃದ್ಧರು ಮೇಲೆ ಹತ್ತಿ ಬರಲು ಕಷ್ಟ ಪಡುತ್ತಿದ್ದಾರೆ. ಅವರಿಗೆ ಆ ಸಮಸ್ಯೆಯನ್ನು ತಪ್ಪಿಸಲು ನಕ್ಷೆಗಾಗಿ ಅರ್ಜಿ ಸಲ್ಲಿಸಿದಲ್ಲಿ ಅವರ ಮನೆಗೆ ನಕ್ಷೆಯನ್ನು ತಲುಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ನನ್ನನ್ನು ಗುರುತಿಸಿ ಬುಡಾ ಅಧ್ಯಕ್ಷ ಸ್ಥಾನ ನಿಒಡೊದ ಶಾಸಕ ಜಿ.ಸೋಮಶೇಖರೆಡ್ಡಿ, ಸಚಿವ ಬಿ.ಶ್ರೀರಾಮುಲು, ಜಿಲ್ಲಾಧ್ತಕ್ಷ ಮುರಹರಗೌಡ ಸೇರಿದಂತೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಂತರ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಸಚಿವರನ್ನಾಗಿ ಮಾಡುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ತಿಳಿಸಿದರು.
ಶಾಸಕ .ಸೋಮಶೇಖರ ರೆಡ್ಡಿ ಮಾತನಾಡಿದರು. ಈ ವೇಳೆ ಮಾರುತಿ ಪ್ರಸಾದ್ ಅವರ ಸ್ನೇಹಿತರು, ಕುಟುಂಬಸ್ಥರು, ಸಮುದಾಯದ ಹಿರಿಯರು, ಪಕ್ಷದ ಕಾರ್ಯಕರ್ತರು ಹೂಮಾಲೆ ಹಾಕಿ ಶುಭ ಕೊರಿದರು.