Advertisement

ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ, ಬಿಎಸ್ ವೈ ಸಿಎಂ ಆಗಿ ಮುಂದುವರಿಯುತ್ತಾರೆ: ಅಶ್ವಥನಾರಾಯಣ

02:10 PM Nov 23, 2020 | keerthan |

ತುಮಕೂರು: ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ‌‌ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದರು.

Advertisement

ತುಮಕೂರು ವಿಶ್ವವಿದ್ಯಾನಿಲಯ ಕಾಲೇಜಿಗೆ ಸೋಮವಾರ ಭೇಟಿ ನೀಡಿ ಕಾಲೇಜು ಆರಂಭದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅಭಿಪ್ರಾಯ ಪಡೆದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ‌‌ವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಕೇಳಬೇಕು‌. ಸಂಪುಟ ವಿಸ್ತರಣೆಯ ವಿಚಾರ ಸಿಎಂ ಹಾಗೂ ವರಿಷ್ಠರ ಮಧ್ಯೆ ಇರವಂತಹದ್ದು, ಹೀಗಾಗಿ ಅವರನ್ನೇ ಕೇಳಬೇಕು ಎಂದರು.

ಡಿಕೆ ಶಿವಕುಮಾರ್ ಅವರ ಸಿಬಿಐ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, ಕಾನೂನು ಕಾನೂನೇ, ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ.‌ ಪ್ರತ್ಯೇಕವಾಗಿ ವ್ಯಕ್ತಿ ಆಧಾರಿತವಾಗಿ ಕಾನೂನು ಅನ್ವಯವಾಗುವುದಿಲ್ಲ. ಎಲ್ಲರಿಗೂ ಕಾನೂನು ಒಂದೇ‌‌‌, ಕಾನೂನು ಪಾಲನೆಗೆ ಅವಕಾಶ ನೀಡಬೇಕು ಎಂದರು.

ಇದನ್ನೂ ಓದಿ:8ನೇ ತರಗತಿವರೆಗೆ ಈ ವರ್ಷ ಶಾಲೆ ಆರಂಭಿಸುವ ಯೋಚನೆಯೇ ಮಾಡಿಲ್ಲ: ಸುರೇಶ್ ಕುಮಾರ್

Advertisement

ಕೆಂಪೇಗೌಡ ಪ್ರಾಧಿಕಾರದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಒಂದು ಜನಾಂಗಕ್ಕೆ, ಭಾಷೆಗೆ ಪ್ರಾಧಿಕಾರ ಮಾಡಿದಾಗ ಎಲ್ಲರ ಅಪೇಕ್ಷೆ ಇರುತ್ತದೆ. ಒಕ್ಕಲಿಗ ಜನಾಂಗಕ್ಕೂ ಅಪೇಕ್ಷೆ ಇದೆ. ಅದು ಆಗುತ್ತದೆ, ಆಗಲೇಬೇಕಾಗುತ್ತದೆ, ಬೇರೆ ದಾರಿಯಿಲ್ಲ.ಇದಕ್ಕೆ ನನ್ನ ಸಹಮತವೂ ಇದೆ‌ ಎಂದರು.

ರೋಶನ್ ಬೇಗ್ ಬಂಧನ ವಿಚಾರವಾಗಿ ಉತ್ತರಿಸಿ, ಎಲ್ಲಾ ಪ್ರಕ್ರಿಯೆಯೂ ಕಾನೂನಾತ್ಮಕವಾಗಿ ನಡೆದಿದೆ. ಸತ್ಯವನ್ನು ಬೆಳಕಿಗೆ ತರುವ ಪ್ರಯತ್ನ ನಡೆದಿದೆ. ಸತ್ಯಾಸತ್ಯತೆ ನೋಡಿ ವಿಚಾರಣೆ ಮಾಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next