Advertisement

BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ

11:39 AM Oct 22, 2020 | Mithun PG |

ಬಳ್ಳಾರಿ: ಜೆಡಿಎಸ್ ಅಭ್ಯರ್ಥಿ ಶಿಕ್ಷಕರಾಗಿದ್ದಾರೆ. ಪ್ರಜ್ಞಾವಂತರೆಲ್ಲರೂ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆ ಅವ್ಯವಸ್ಥೆಗೊಂಡಿದೆ. ಸರಕಾರದಲ್ಲಿ ಬೇಡವಾದವರಿಗೆ ಶಿಕ್ಷಣ ಇಲಾಖೆ ಸಚಿವ ಮಾಡ್ತಾರೆ. ಈ ಇಲಾಖೆ ಎಂದರೆ ಎಲ್ಲರಿಗೂ ಬೇಡವಾಗಿದ್ದಾಗಿದೆ. ಆದರೆ, ರಾಜ್ಯಕ್ಕೆ ಏನಾದರೂ ಕೊಡುಗೆ ಕೊಡಲು ಈ ಇಲಾಖೆಯಿಂದಲೇ ಸಾಧ್ಯ. ಹಾಗಾಗಿ ಈ ಕ್ಷೇತ್ರಕ್ಕೆ ಜ್ಞಾನ ಇರುವವರೇ ಬರಬೇಕು ಎಂದರು.

ವಠಾರ ಶಾಲೆ ಶಿಕ್ಷಣ ಶೇ.5 ಮಂದಿಗೆ ಸಿಕ್ಕಿಲ್ಲ. ಅಷ್ಟೇ ಪ್ರಮಾಣ ಕೋವಿಡ್ ದಕ್ಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮೂಲೆಗಟ್ಟಲಾಗಿದೆ. ನೇಮಕಾತಿಯ ಮಾಡಿಲ್ಲ. ನಮ್ಮ ಕಾಲದಲ್ಲಿ ಒಂದೂ ಶಾಲೆಯನ್ನು ಮುಚ್ಚಿರಲಿಲ್ಲ‌. ಈಗ ನೂರಾರು ಶಾಲೆಗಳನ್ನು ಮುಚ್ಚಲಾಗಿದೆ. ಶಾಸನಸಭೆಗಳೂ ಸಹಿತ, ವಿಧಾನಪರಿಷತ್ ಘನತೆ ಕಳೆಯುತ್ತಿದ್ದಾರೆ‌. ಸುಧಾರಣೆಗೆ ಪ್ರಯತ್ನಸುತ್ತಿದ್ದೆವೆ. ಸರಕಾರಗಳು ಮಾತು ಕೇಳುವುದಿಲ್ಲ ಎಂದು ಕಿಡಿಕಾರಿದರು.

ಶಿಕ್ಷಕರ ವರ್ಗಾವಣೆ ಅವಶ್ಯಕತೆ ಇದೆ‌‌. ಈ ಸಮಯದಲ್ಲಿ ಇಂತಹ ನಿರ್ಧಾರ ಮಾಡುವುದು ಸರಿಯಲ್ಲ. ನೀತಿ ಸಂಹಿತೆ ಉಲ್ಲಂಘನೆಯಾಗಬಹುದು. ರಾಜಕೀಯದಲ್ಲಿ ಪ್ರಾಮಾಣಿಕರು, ಸಚ್ಚಾರಿತ್ರರು ಇರಬೇಕು ಎಂದು ಜನ ಮಾತಾಡುತ್ತಿದ್ದಾರೆ‌. ಶಿಕ್ಷಣ ಮಂತ್ರಿಯಾಗಿ ಇನ್ನೊಂದಿಷ್ಟು ಕೆಲಸಗಳನ್ನು ಮುಂದುವರೆಸಬಹುದಿತ್ತು. ರಾಜಕೀಯದಲ್ಲಿ ನೈತಿಕತೆ ಪಾಲಿಸುತ್ತಿದ್ದೆವೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.

ದೇವೇಗೌಡರ ಮೇಲೆ ವಿಶ್ವಾಸವಿದೆ. ತಪ್ಪಿದ್ದರೆ ತಪ್ಪೆನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸುಧಾರಣೆ ಕಂಡಿದೆ. ಆದರೆ, ರಾಜ್ಯದಲ್ಲಿ ಸರಕಾರ ಮಾಡಲು ಸಾಧ್ಯ ಎಂದು ಅವರಿಗೆ ಹೇಳಿದ್ದೇನೆ. ಹಿಂದಿನ ಜನತಾ ಪರಿವಾರದಂತೆ ಆಗಬೇಕಿದೆ. ಅಂದಿನ ರಾಜಕೀಯ ಇಲ್ಲ. ಇಂದಿನ ಕಾಲದಲ್ಲಿ ದುಡ್ಡು ಕೊಟ್ಟು ಜನರನ್ನು ಸೇರಿಸುತ್ತಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ನನಗಿಂತಲೂ ಜೂನಿಯರ್ಸ್, ಅವರ ಅದೃಷ್ಟಕ್ಕೆ ಮುಖ್ಯಮಂತ್ರಿ ಆದರು. ನಮ್ಮ ಹಣೆಬರಹ ಇಷ್ಟಿದೆ.

Advertisement

ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಈಶಾನ್ಯ ಭಾಗದ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ತಿಮ್ಮಯ್ಯ ಪುರ್ಲೆ ಅವರು ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದಾಗ ಶಿಕ್ಷಕರ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಲಾಗಿದೆ. ಬಿಜೆಪಿ ಹೇಳಿಕೊಳ್ಳುವ ಕೆಲಸಗಳನ್ನು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರಿಗೆ ಮಾಡಿಲ್ಲ‌ ಎಂದರು.

ಲಂಚವಿಲ್ಲದೆ ಪಾರದರ್ಶಕವಗಿ ನೇಮಕಾತಿ ನಡೆಸಿದ ಸಾಧನೆ ಮಾಡಿದ್ದೇವೆ. ಶಿಕ್ಷಕರ ಮೀಸಲಾತಿಯಲ್ಲಿ ಮಹಿಳೆಯರಿಗೆ ಶೆ.50ರಷ್ಟು ಮೀಸಲು ನೀಡಲಾಗಿದೆ. ಮೊರಾರ್ಜಿ ದೇಸಾಯಿ ಶಾಲೆ ಆರಂಭ ಮಾಡಿದ್ದೇವೆ. ವರ್ಗಾವಣೆಗೆ ಕೌನ್ಸೆಲಿಂಗ್ ಮೂಲಕ ಮಾಡಲು ಆದೇಶ ತರಲಾಗಿತ್ತು. ಸರಕಾರಿ ಶಾಲಾ ಕಾಲೇಜುಗಳನ್ನು ಆರಂಭಿಸಲಾಯಿತು. ಖಾಸಗಿ ಶಾಲೆಗಳ ಅನುದಾನ ವಿಸ್ತರಿಸಲಾಯಿತು. ಇದು 36 ಸಾವಿರ ಜನರಿಗೆ ನೆರವಾಯಿತು.

ಮುಖ್ಯಮಂತ್ರಿಗಳು ಈವರೆಗೆ ಅನುದಾನಿತ ಶಾಲೆಗಳ ಶಿಕ್ಷಕರಿಗೆ ವೇತನ ನೀಡಲಿಲ್ಲ‌. ಇದರಿಂದ ಶಿಕ್ಷಕರು ಆತ್ಮಹತ್ಯೆಯೂ ಮಾಡಿಕೊಂಡರು. ಕೋವಿಡ್ ಗೂ ಬಲಿಯಾದರು‌. ಶಿಕ್ಷಕರ ಕ್ಷೇತ್ರಕ್ಕೂ ರಾಜಕಾರಣಿಗಳು ಯಾಕೆ ಬರಬೇಕು ?. ಇದನ್ನಾದರೂ ಶಿಕ್ಷಕರಿಗೆ ಬಿಟ್ಟು ಬಿಡಿ. ಶಿಕ್ಷಕರಾಗಿರುವ ನಮ್ಮ ಅಭ್ಯರ್ಥಿಗೆ ಮತ ನೀಡಬೇಕು‌‌ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next