Advertisement

ಭೂಗಳ್ಳರ ವಿರುದ್ಧ ಕ್ರಮಕ್ಕೆ ಬಿಎಸ್‌ಪಿ ಒತ್ತಾಯ

01:27 PM Sep 01, 2017 | |

ಬೀದರ: ಸರ್ಕಾರಿ ಭೂಮಿ ಹಾಗೂ ವಕ್ಪ್ ಆಸ್ತಿ ಕಬಳಿಸುತ್ತಿರುವ ಭೂಗಳ್ಳರ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

Advertisement

ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಜುಲೆಧೀಕಾರ್‌ ಹಾಸ್ಮಿ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು. ಬಳಿಕ
ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ಭೂ ಮಾಫಿಯಾ ಜಿಲ್ಲೆಗೂ ಕಾಲಿಟ್ಟಿದೆ. ಎಲ್ಲೆಡೆ ಸರ್ಕಾರಿ ಭೂಮಿಯೇ ಲಪಟಾಯಿಸಲಾಗುತ್ತಿದೆ. ಸರ್ಕಾರದ ಆಸ್ತಿ ಖಾಸಗಿಯವರಿಗೆ ಅಧಿಕಾರಿಗಳೇ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ನಡೆದಿರುವಂಥ ಭೂ ಅಕ್ರಮ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಭೂ ಹಗರಣದಲ್ಲಿ ಭಾಗಿಯಾದವರ
ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ ನಗರದ ಹೃದಯಭಾಗದಲ್ಲಿ ನಗರಸಭೆಗೆ ಸೇರಿದ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿ ಅನಧಿಕೃತವಾಗಿ
ಅತಿ ಕಡಿಮೆ ದರದಲ್ಲಿ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ತರಲಾಗಿದೆ.

ಈ ಪ್ರಕರಣ ಸಂಬಂಧ ನಗರಸಭೆ ಆಯುಕ್ತ ಮತ್ತು ಹಿರಿಯ ಉಪ ನೋಂದಣಾಧಿಕಾರಿಗಳನ್ನು ಬಂಧಿಸಲಾಗಿದೆ. ಕೂಡಲೇ ಇವರಿಬ್ಬರನ್ನು ಸೇವೆಯಿಂದ ವಜಾಗೊಳಿಸಿ ಅವರ ಅವಧಿಯಲ್ಲಿ ನಡೆದ ಅವ್ಯವಹಾರದ ಸಮಗ್ರ ತನಿಖೆ ನಡೆಸಲು ಒತ್ತಾಯಿಸಲಾಗಿದೆ.

ಅಷ್ಟೇ ಅಲ್ಲ ನಗರಸಭೆ ನಗರದ ವಿವಿಧ ಸ್ಥಳಗಳಲ್ಲಿ ನಿರ್ಮಿಸಿದ ಮಳಿಗೆಗಳನ್ನು ಸರ್ಕಾರದ ನಿಯಮ
ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ಹಂಚಿಕೆ ಮಾಡಲಾಗಿದೆ. ಈ ಬಗ್ಗೆಯೂ ತನಿಖೆ ಆಗಬೇಕು. ವಕ್ಫ್  ಆಸ್ತಿ, ಸರ್ಕಾರ ಜಮೀನು, ರಸ್ತೆ ಹಾಗೂ ಇನ್ನಿತರ ಸ್ಥಳ ಅತಿಕ್ರಮಣ ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

Advertisement

ಪ್ರಮುಖರಾದ ಪಿ.ಜಿ. ಜೋಸೆಫ್‌, ಲಕ್ಷ್ಮಣ ಬೂದಿ, ಅಂಬಾದಾಸ ಚಕ್ರವರ್ತಿ, ಸೈಯ್ಯದ್‌ ವಹೀದ್‌
ಲಖನ್‌, ಅಲಿ ಅಹ್ಮದ್‌ ಖಾನ್‌, ರಾಜಕುಮಾರ ಮೂಲಭಾರತಿ, ಅಶೋಕ ಮಾಳಗೆ, ಅಲಿಖಾನ್‌
ಡಾನ್‌, ಕಪಿಲ್‌ ಗೋಡಬೋಲೆ, ಪವನ್‌ ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next