ಹೊಸದಿಲ್ಲಿ: ದೇಶದಲ್ಲಿನ ಮಹಿಳಾ ಸಬಲೀಕರಣಕ್ಕೆ ಸಾಕ್ಷಿ ಎಂಬಂತೆ 69 ನೇ ಗಣರಾಜ್ಯೋತ್ಸವ ಸುಸಂದರ್ಭದಲ್ಲಿ ರಾಜಪಥದ ಅಂಗಳದಲ್ಲಿ ಬಿಎಸ್‌ಎಫ್ ನ ಮಹಿಳಾ ಯೋಧರು ರೋಮಾಂಚನಕಾರಿ ಕಸರತ್ತುಗಳನ್ನು ಪ್ರದರ್ಶಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದರು.
‘ಸೀಮಾ ಭವಾನಿ’ಎಂಬ ಕಠಿಣ ತರಬೇತಿ ಪಡೆದ 106 ಮಹಿಳಾ ಯೋಧರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ರೋಮಾಂಚನಕಾರಿ ಕಸರತ್ತುಗಳನ್ನು ಪ್ರದರ್ಶಿಸಿ ಎಲ್ಲರು ಮೂಕವಿಸ್ಮಿತರಾಗುವಂತೆ ಮಾಡಿದರು.
ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಆಗಿರುವ ಸ್ಟಾಂಜಿನ್ ನೊರ್‌ಯಾಂಗ್ ಅವರ ನೇತೃತ್ವದ ತಂಡ ಪುರುಷರಿಗೂ ಸವಾಲೆನಿಸುವ ಕಠಿಣ ಪ್ರದರ್ಶನಗಳನ್ನು ಪ್ರದರ್ಶಿಸಿದರು.
ಸಾಹಸ ಪ್ರದರ್ಶಿಸಿದ ವೀರ ವನಿತೆಯರು 30 ವರ್ಷದ ಒಳಗಿನವರಾಗಿದ್ದು ಕೆಲವರಿಗೆ ಮದುವೆಯಾಗಿ ಮಕ್ಕಳೂ ಇದ್ದಾರೆ.
ಸಮಾರಂಭದಲ್ಲಿ ಉಪಸ್ಥಿತರಿಂದ ಆಸೀಯಾನ್‌ನ 10 ರಾಷ್ಟ್ರಗಳ ನಾಯಕರು ಮಹಿಳಾ ಸಾಹಸವನ್ನು ಕಂಡು ಭಾರೀ ಪ್ರಶಂಸೆ ವ್ಯಕ್ತ ಪಡಿಸಿರುವ ಬಗ್ಗೆ ವರದಿಯಾಗಿದೆ.