Advertisement
ರಾತ್ರಿ ಹೊತ್ತು ಕೇಳಿಬಂದ ಶಬ್ದಮಂಗಳವಾರ ತಡರಾತ್ರಿ 1 ಗಂಟೆಗೆ ಪಾಕಿಸ್ತಾನದ ಗಡಿಯಾಚೆಯಿಂದ ವಿಮಾನದಂಥ ವಸ್ತುವೊಂದು ಹಾರಾಡುವ ಧ್ವನಿ ಕೇಳಿ ಬಂತು. ಶಬ್ದ ಬಂದ ಕಡೆಗೆ ದೃಷ್ಟಿ ಹಾಯಿಸಿದಾಗ ಅದು ಡ್ರೋನ್ ಎಂದು ಖಚಿತವಾಯಿತು. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಬಿಎಸ್‌ಎಫ್ ಯೋಧರು, ಗುಂಡು ಹಾರಿಸುವ ಮೂಲಕ ಅದನ್ನು ಹೊಡೆದುರುಳಿಸಿದರು.
ಡ್ರೋನ್ ಹೊಡೆದುರುಳಿಸಿದ ಕೂಡಲೇ ಅದರ ಅವಶೇಷಗಳನ್ನು ಹುಡುಕಲು, ಆ ಪ್ರಾಂತ್ಯದ ಘಗ್ಗರ್ ಹಾಗೂ ಸಿಂಘೋಕೆ ಹಳ್ಳಿಗಳ ಹೊರವಲಯದಲ್ಲಿರುವ ಹೊಲಗದ್ದೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿದ್ದು. ಆ ಸಂದರ್ಭದಲ್ಲಿ, ಎರಡು ಹಳದಿ ಬಣ್ಣದ ಚೀಲಗಳು ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಗೆ ಬೇಕಾದ ಸಾಮಗ್ರಿಗಳು
“ಮೊದಲಿಗೆ ಅವುಗಳಲ್ಲಿ ಮಾದಕ ವಸ್ತುಗಳಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಚೀಲಗಳನ್ನು ತೆರೆದು ನೋಡಿದಾಗ ಒಂದರಲ್ಲಿ 4.7 ಕೆಜಿ ಆರ್‌ಡಿಎಕ್ಸ್, ಚೀನಾ ನಿರ್ಮಿತ ಪಿಸ್ತೂಲು, 22 ಬುಲೆಟ್‌ಗಳುಳ್ಳ ಎರಡು ಮ್ಯಾಗಜಿನ್, ಮೂರು ಇಲೆಕ್ಟ್ರಾನಿಕ್ ಡಿಟೋನೇಟರ್‌ಗಳು, ಟೈಮರ್ ಯಂತ್ರ, ಡಿಟೋನೇಟಿಂಗ್ ವೈರ್, ಸ್ಲಿಂಟರ್ಸ್, ಸೆಲ್‌ಗಳು, ಸ್ಟೀಲ್ ಕಂಟೈನರ್, ನೈಲಾನ್ ದಾರ, ಪ್ಲಾಸ್ಟಿಕ್ ಪೈಪ್, ಪ್ಯಾಕಿಂಗ್ ಸಾಮಗ್ರಿಗಳು ಹಾಗೂ 1 ಲಕ್ಷ ರೂ. ಹಣ ಇತ್ತು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಸಿಕ್ಕಿರುವ ಆರ್‌ಡಿಎಕ್ಸ್ ಸಾಮಗ್ರಿಯು ಮಿಲಿಟರಿ ಗ್ರೇಡ್‌ನದ್ದು ಎಂದು ಅವರು ತಿಳಿಸಿದ್ದಾರೆ.