Advertisement

BSF ಅಧಿಕಾರಿ, ಪತ್ನಿ ಭಾರತೀಯರಲ್ಲ, ವಿದೇಶಿಯರು; ಬಂಧನಕ್ಕೆ ಅಸ್ಸಾಂ ಟ್ರಿಬ್ಯೂನಲ್ ಆದೇಶ

09:30 AM Aug 25, 2019 | Nagendra Trasi |

ಗುವಾಹಟಿ: ಬಿಎಸ್ ಎಫ್ (ಗಡಿ ಭದ್ರತಾ ಪಡೆ) ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಪತ್ನಿ ಭಾರತೀಯ ಪ್ರಜೆಗಳಲ್ಲ ಅವರು ವಿದೇಶಿಯರು ಎಂದು ಅಸ್ಸಾಂನ ಜೋಹ್ರಾತ್ ಜಿಲ್ಲೆಯ ದ ಟ್ರಿಬ್ಯೂನಲ್ ಘೋಷಿಸಿದೆ.

Advertisement

ಬಿಎಸ್ ಎಫ್ ನ ಯೋಧ ಮುಝಿಬುರ್ ರಹಮಾನ್ ಜೋಹ್ರಾತ್ ಜಿಲ್ಲೆಯ ಮೇರಾಪಾನಿ ಪ್ರದೇಶದ ಉದಯ್ ಪುರ್ ಮಿಕಿರ್ ಪಟೈ ನಿವಾಸಿಯಾಗಿದ್ದು, ರೆಹಮಾನ್ ಪತ್ನಿ ಕೂಡಾ ಇಲ್ಲಿನ ನಿವಾಸಿಯಲ್ಲ ಎಂದು ಟ್ರಿಬ್ಯೂನಲ್ ಹೇಳಿದೆ.  ಅಲ್ಲದೇ ಅವರನ್ನು ಬಂಧಿಸುವಂತೆ ಆದೇಶ ನೀಡಿದೆ.

ಪ್ರಸ್ತುತ ಪಂಜಾಬ್ ನ 144 ಬೆಟಾಲಿಯನ್ ನಲ್ಲಿ ರೆಹಮಾನ್ ಕಾರ್ಯನಿರ್ವಹಿಸುತ್ತಿದ್ದಾರೆ. ರೆಹಮಾನ್ ಹಾಗೂ ಪತ್ನಿ ಅನುಮಾನಸ್ಪದ ಮತದಾರರು ಎಂದು ಎನ್ ಆರ್ ಸಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿ, ಪ್ರಕರಣವನ್ನು ಜೋಹ್ರಾತ್ ನ ಟ್ರಿಬ್ಯೂನಲ್ ಗೆ ಶಿಫಾರಸು ಮಾಡಿದ್ದರು.

ಜುಲೈನಲ್ಲಿ ರಜೆ ಮೇಲೆ ತೆರಳಿದ್ದ ಬಿಎಸ್ ಎಫ್ ಅಧಿಕಾರಿ ರೆಹಮಾನ್ ಗೆ ಟ್ರಿಬ್ಯೂನಲ್ ತೀರ್ಪು ಹೊರಬಿದ್ದಿರುವುದು ತಿಳಿದು ಬಂದಿದ್ದು, ತಾವು ವಿದೇಶಿಯರು ಎಂಬ ಟ್ರಿಬ್ಯೂನಲ್ ತೀರ್ಪು ಪ್ರಶ್ನಿಸಿ ಗುವಾಹಟಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

ನಾವು ಬಾಂಗ್ಲಾದೇಶಿಯರು ಅಲ್ಲ, ಪಾಕಿಸ್ತಾನಿಯರು ಅಲ್ಲ. ನಾವು ಭಾರತೀಯರು, ಅಸ್ಸಾಂನಲ್ಲಿ ನಾವು ಜನಿಸಿದ್ದೇವೆ. 1923ರಲ್ಲಿಯೇ ನಾವು ಇಲ್ಲಿ ವಾಸವಿರುವುದಕ್ಕೆ ಭೂಮಿಯ ದಾಖಲೆ ಪತ್ರವಿದೆ. ಆದರೆ ಗಡಿ ಭದ್ರತಾ ಪೊಲೀಸರು ನಮ್ಮನ್ನು ಡಿ ವೋಟರ್(ಅನುಮಾನಸ್ಪದ ಮತದಾರರು) ಎಂದು ಪರಿಗಣಿಸಿದ್ದಾರೆ ಎಂದು ರಹಮಾನ್ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next