ನವದೆಹಲಿ:ಪಂಜಾಬ್ ನ ಅಟ್ಟಾರಿ ಗಡಿ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಿದ ಇಬ್ಬರನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿರುವ ಘಟನೆ ಗುರುವಾರ(ಡಿಸೆಂಬರ್ 17) ನಸುಕಿನ ವೇಳೆ ನಡೆದಿದೆ ಎಂದು ಬಿಎಸ್ ಎಫ್ ಮೂಲಗಳು ತಿಳಿಸಿವೆ.
ಬಿಎಸ್ ಎಫ್ ದಾಳಿಗೆ ಬಲಿಯಾಗಿರುವ ಇಬ್ಬರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.
ಅಟ್ಟಾರಿ ಗಡಿ ಪ್ರದೇಶದಲ್ಲಿ ನಸುಕಿನ 2.30ರ ವೇಳೆಗೆ ಇಬ್ಬರು ನುಸುಳುಕೋರರನ್ನು ಬಿಎಸ್ ಎಫ್ ಹೊಡೆದುರುಳಿಸಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿದೆ. ಈ ಎನ್ ಕೌಂಟರ್ ಅಟ್ಟಾರಿಯ ರಜಾತಾಳ್ ಪ್ರದೇಶದಲ್ಲಿ ನಡೆದಿದೆ ಎಂದು ವಿವರಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಅಟ್ಟಾರಿ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಅತೀಯಾದ ಮಂಜಿನ ವಾತಾವರಣದಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಆರ್.ಎನ್ ಶೆಟ್ಟಿ ಇನ್ನಿಲ್ಲ: ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಇವರ ಕೊಡುಗೆ ಅಪಾರ !
ಇತ್ತೀಚೆಗೆ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕಿಸ್ತಾನ ಮೂಲದ ಉಗ್ರರು ನಿರಂತರವಾಗಿ ಭಾರತದೊಳಕ್ಕೆ ನುಸುಳಲು ಯತ್ನಿಸುವುದು ಹಾಗೂ ಪಾಕ್ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಘಟನೆ ಮುಂದುವರಿದಿದೆ.