ಮುಂಬಯಿ : ಆಶಾದಾಯಕ ಸಾಂಸ್ಥಿಕ ತ್ತೈಮಾಸಿಕ ಫಲಿತಾಂಶಗಳಿಂದ ಗರಿಗೆದರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 205.06 ಅಂಕಗಳ ಜಿಗಿತದೊಂದಿಗೆ 32,514.94 ಅಂಕಗಳ ಮಟ್ಟದಲ್ಲಿ ಹೊಸ ಭರವಸೆಯೊಂದಿಗೆ ಭರ್ಜರಿಯಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 62.60 ಅಂಕಗಳ ಮುನ್ನಡೆಯೊಂದಿಗೆ 10,077 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಹಾಗಿದ್ದರೂ ಇಂದಿನ ಮಾರುಕಟ್ಟೆ ವಹಿವಾಟು ಹರಹು ನೇತ್ಯಾತ್ಮಕವಾಗಿತ್ತು. ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,442 ಶೇರುಗಳು ಹಿನ್ನಡೆಗೆ ಗುರಿಯಾದವು. 1,264 ಶೇರುಗಳು ಮುನ್ನಡೆ ಕಂಡವು.
ಉಳಿತಾಯ ಖಾತೆ ಮೇಲಿನ ಬಡ್ಡಿಯನ್ನು ಇಳಿಸಿದ ಪ್ರಯುಕ್ತ ಎಸ್‌ಬಿಐ ಶೇರುಗಳು ಶೇ.4.5ರಷ್ಟು ಮುನ್ನಡೆ ಕಂಡವು.
ಲಾರ್ಸನ್ ಆ್ಯಂಡ್ ಟೋಬ್ರೋ ಶೇ.2.2ರ ಏರಿಕೆಯನ್ನು ಇಂದಿನ ವಹಿವಾಟಿನಲ್ಲಿ , ಸೆನ್ಸೆಕ್ಸ್‌ನಲ್ಲಿ ಟಾಪ್ ಗೇನರ್ ಎನಿಸಿಕೊಂಡಿತು. ಲೂಪಿನ್, ಐಸಿಐಸಿಐ ಬ್ಯಾಂಕ್, ವೇದಾಂತ, ಕೋಟಕ್ ಮಹೀಂದ್ರ ಬ್ಯಾಂಕ್ ಟಾಪ್ ಗೇನರ್ ಪಟ್ಟಿಯಲ್ಲಿ ಕಾಣಿಸಿಕೊಂಡವು.
ಸೆನ್ಸೆಕ್ಸ್ ಟಾಪ್ ಲೂಸರ್‌ಗಳ ಪಟ್ಟಿಯಲ್ಲಿ ಸನ್ ಫಾರ್ಮಾ, ಡಾ. ರೆಡ್ಡಿ, ಐಟಿಸಿ, ಸಿಪ್ಲಾ ಕಾಣಿಸಿಕೊಂಡವು.