ಮುಂಬಯಿ : ಸೆಪ್ಟಂಬರ್ ತಿಂಗಳ ವಾಯಿದೆ ವಹಿವಾಟನ್ನು ಆಶಾದಾಯಕವಾಗಿ ಆರಂಭಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 71 ಅಂಕಗಳ ಮುನ್ನಡೆಯನ್ನು ದಾಖಲಿಸಿತು.
ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 140.44 ಅಂಕಗಳ ಜಿಗಿತವನ್ನು ದಾಖಲಿಸಿ 31,870.93 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40.10 ಅಂಕಗಳ ಮುನ್ನಡೆಯೊಂದಿಗೆ 9,958.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾ. ರೆಡ್ಡಿ, ಮಾರುತಿ ಸುಜುಕಿ, ರಿಲಯನ್ಸ್,ಇನ್‌ಫೋಸಿಸ್, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಡಾ. ರೆಡ್ಡಿ, ಬಜಾಜ್ ಆಟೋ, ಗೇಲ್, ಏಶ್ಯನ್ ಪೇಂಟ್, ಅರಬಿಂದೋ ಫಾರ್ಮಾ ಶೇರುಗಳು ಮುನ್ನಡೆ ಸಾಧಿಸಿದವು.
ಟಾಪ್ ಲೂಸರ್‌ಗಳಾಗಿ ಟಿಸಿಎಸ, ಭಾರ್ತಿ ಏರ್‌ಟೆಲ್, ಐಡಿಯಾ ಸೆಲ್ಯುಲರ್, ಎಚ್ ಡಿ ಎಫ್ ಸಿ, ಪವರ್ ಗ್ರಿಡ್ ಶೇರುಗಳು ಹಿನ್ನಡೆಗೆ ಗುರಿಯಾದವು.