ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 93 ಅಂಕಗಳ ಏರಿಕೆಯನ್ನು ಕಂಡು ಹೊಸ ಸಾರ್ವಕಾಲಿಕ ದಾಖಲೆಯ 38,989.65 ಅಂಕಗಳ ಮಟ್ಟವನ್ನು ತಲುಪಿತು. ಆದರೆ ಅನಂತರದಲ್ಲಿ ಕಂಡು ಬಂದ ವ್ಯಾಪಕ ಶೇರು ಮಾರಾಟದ ಪರಿಣಾಮವಾಗಿ ಸೆನ್ಸೆಕ್ಸ್ ದಾಖಲೆಯ ಮಟ್ಟದಿಂದ ಹಿಂದೆ ಸರಿಯಿತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 12.13 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 39,908.76 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.50 ಅಂಕಗಳ ನಷ್ಟದೊಂದಿಗೆ 11,735.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 644.83 ಅಂಕಗಳನ್ನು ಸಂಪಾದಿಸಿತ್ತು.
ನಾಳೆ ಗುರುವಾರ ಆಗಸ್ಟ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ನಡೆಯಲಿರುವ ಕಾರಣ ಶೇರು ಮಾರುಕಟ್ಟೆಯಲ್ಲಿ ಇಂದೇ ಎಚ್ಚರಿಕೆಯ ವಹಿವಾಟು ಕಂಡು ಬಂತು.
ಟಾಪ್ ಗೇನರ್‌ಗಳಾಗಿ ಮೂಡಿ ಬಂದ ವೇದಾಂತ, ಸನ್ ಫಾರ್ಮಾ, ಅದಾನಿ ಪೋರ್ಟ್, ಟಾಟಾ ಮೋಟರ್, ಎಚ್ ಡಿ ಎಫ್ ಸಿ, ಎಸ್‌ಬಿಐ, ಒಎನ್‌ಜಿಸಿ, ಆರ್‌ಐಎಲ್, ಭಾರ್ತಿ ಏರ್‌ಟೆಲ್, ಮಹೀಂದ್ರ, ಎಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ, ಎನ್‌ಟಿಪಿಸಿ ಶೇರುಗಳು ಶೇ.2.06ರಷ್ಟು ಏರಿದವು.
ಟಾಪ್ ಲೂಸರ್‌ಗಳಾಗಿ ಕೋಲ್ ಇಂಡಿಯಾ, ಎಸ್ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಇನ್‌ಫೋಸಿಸ್, ಎಚ್‌ಯುಎಲ್ , ಐಸಿಐಸಿಐ ಬ್ಯಾಂಕ್ ಶೇ.1.97ರ ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 22 ಪೈಸೆಗಳ ಕುಸಿತ ಕಂಡು 70.32 ರೂ. ಮಟ್ಟಕ್ಕೆ ಜಾರಿತು. ಶೇರು ಮಾರುಕಟ್ಟೆಯಲ್ಲಿನ ನಿಸ್ತೇಜ ವಾತಾವರಣಕ್ಕೆ ರೂಪಾಯಿ ಕುಸಿತ ಕೂಡ ಕಾರಣವಾಯಿತು.