ಮುಂಬಯಿ : ನಿರಂತರ ನಾಲ್ಕನೇ ದಿನ ಏರು ಗತಿಯನ್ನು ಕಾಯ್ದುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ವಹಿವಾಟನ್ನು 91.71 ಅಂಕಗಳ ಏರಿಕೆಯೊಂದಿಗೆ 33,949.98 ಅಂಕಗಳ ಮಟ್ಟಕ್ಕೇರಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.90 ಅಂಕಗಳ ಏರಿಕೆಯನ್ನು ದಾಖಲಿಸಿ 10,402.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 774.47 ಅಂಕಗಳನ್ನು ಸಂಪಾದಿಸಿರುವುದು ಸ್ಥಿರತೆಯ ದ್ಯೋತಕವೆಂದು ವಿಶ್ಲೇಷಿಸಲಾಗಿದೆ.
ಮುಂಬಯಿ ಶೇರು ಮಾರುಕಟ್ಟೆಗೆ ನಿರಂತರವಾಗಿ ವಿದೇಶಿ ಬಂಡವಾಳ ಹರಿದು ಬರುತ್ತಿರುವುದು ಮತ್ತು ದೇಶೀಯ ಹೂಡಿಕೆದಾರ ಸಂಸ್ಥೆಗಳು ನಿರಂತರ ಶೇರುಗಳನ್ನು ಖರೀದಿಸುತ್ತಿರುವುದೇ ಈ ಪರಿಯ ತೇಜಿಗೆ ಕಾರಣವಾಗಿದೆ.
ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿನ್ನೆ ಸೋಮವಾರ 359.35 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದ್ದರು. ವಿದೇಶಿ ಹೂಡಿಕೆದಾರರು 1,300.93 ಕೋಟಿ ರೂ. ಶೇರುಗಳನ್ನು ಮಾರಿದ್ದರು.