Advertisement

ಮುಂಬಯಿ ಶೇರು ನಿರಂತರ 3ನೇ ದಿನ ಜಂಪ್‌ : 193 ಅಂಕ ಏರಿಕೆ

11:15 AM Mar 06, 2019 | |

ಮುಂಬಯಿ : ನಿರಂತರ ಮೂರನೇ ದಿನವಾಗಿ ಇಂದು ಬುಧವಾರ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 193 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 36,636.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 65 ಅಂಕಗಳ ಏರಿಕೆಯನ್ನು ದಾಖಲಿಸಿ 11,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಏರಿತು.

ಇಂದಿನ ವಹಿವಾಟಿನಲ್ಲಿ ಬಜಾಜ್‌ ಫಿನಾನ್ಸ್‌ ಶೇರು ಶೇ.2.60 ಏರಿದರೆ ಐಸಿಐಸಿಐ ಬ್ಯಾಂಕ್‌ ಶೇರು ಶೇ.2.55ರಷ್ಟು ಏರಿತು. ಇವುಗಳನ್ನು ಅನುಸರಿಸಿ ವೇದಾಂತ, ಪವರ್‌ ಗ್ರಿಡ್‌, ಎಚ್‌ ಡಿ ಎಫ್ ಸಿ, ಎನ್‌ ಟಿ ಪಿ ಸಿ, ಐಟಿಸಿ, ಟಿಸಿಎಸ್‌, ಭಾರ್ತಿ ಏರ್‌ಟೆಲ್‌, ಕೋಲ್‌ ಇಂಡಿಯಾ, ಮಹೀಂದ್ರ, ಎಸ್‌ಬಿಐ, ಬಜಾಜ್‌ ಆಟೋ ಮೊದಲಾದ ಶೇರುಗಳು ಶೇ.2ರಷ್ಟು ಏರಿದವು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,850 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,673 ಶೇರುಗಳು ಮುನ್ನಡೆ ಸಾಧಿಸಿದವು; 1,026 ಶೇರುಗಳು ಹಿನ್ನಡೆಗೆ ಗುರಿಯಾದವು; 151 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next