Advertisement

ಚುನಾವಣಾ ಪೂರ್ವ rally 2ನೇ ದಿನಕ್ಕೆ : ಸೆನ್ಸೆಕ್ಸ್‌ 481 ಅಂಕ ಜಂಪ್‌

11:40 AM Mar 12, 2019 | |

ಮುಂಬಯಿ : ವಿದೇಶಿ ಬಂಡವಾಳದ ಹೆಚ್ಚಿದ ಒಳಹರಿವು ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕತೆಯೊಂದಿಗೆ ಚುನಾವಣಾ ಪೂರ್ವ ರಾಲಿ ಎರಡನೇ ದಿನವೂ ಮುಂದುವರಿದಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟನ್ನು 481 ಅಂಕಗಳ ಭರ್ಜರಿ ಏರಿಕೆಯೊಂದಿಗೆ 37,535.66 ಅಂಕಗಳ ಮಟ್ಟವನ್ನು ತಲುಪಿತು.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 133.15 ಅಂಕಗಳ ಏರಿಕೆಯನ್ನು ದಾಖಲಿಸಿ 11,301.20 ಅಂಕಗಳ ಮಟ್ಟವನ್ನು ತಲುಪಿ ದಿನದ ವಹಿವಾಟನ್ನು ಬಲಿಷ್ಠವಾಗಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್‌ ಟೆಲ್‌ ಶೇರು ಶೇ.4.61ರ ಏರಿಕೆಯನ್ನು ದಾಖಲಿಸಿದರೆ ಇದನ್ನು ಅನುಸರಿಸಿ ಐಸಿಐಸಿಐ ಬ್ಯಾಂಕ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಲಾರ್ಸನ್‌, ಸನ್‌ ಫಾರ್ಮಾ, ಆರ್‌ಐಎಲ್‌, ಟಾಟಾ ಮೋಟರ್‌ ಮೊದಲಾದ ಮುಂಚೂಣಿ ಶೇರುಗಳು ಶೇ.3.69ರ ಏರಿಕೆಯನ್ನು ದಾಖಲಿಸಿದವು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,862 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,653 ಶೇರುಗಳು ಮುನ್ನಡೆ ಸಾಧಿಸಿದವು; 1,067 ಶೇರುಗಳು ಹಿನ್ನಡೆಗೆ ಗುರಿಯಾದವು; 142 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next