Advertisement

ಜಿಎಸ್‌ಟಿ ರೇಟ್‌ ಕಟ್‌ ಪರಿಣಾಮ: ಸೆನ್ಸೆಕ್ಸ್‌ ಹೊಸ ದಾಖಲೆಯ ಎತ್ತರಕ್ಕೆ

04:16 PM Jul 23, 2018 | |

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಸೋಮವಾರದ ವಹಿವಾಟನ್ನು 222.23 ಅಂಕಗಳ ಉತ್ತಮ ಜಿಗಿತದೊಂದಿಗೆ 36,178.60 ಅಂಕಗಳ ಮಟ್ಟಕ್ಕೆ ಏರುವ ಮೂಲಕ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪುವ ಸಾಧನೆ ಮಾಡಿತು. ವಹಿವಾಟಿನ ನಡುವೆ ಸೆನ್ಸೆಕ್ಸ್‌ 36,749.69 ಅಂಕಗಳ ಎತ್ತರವನ್ನು ಏರಿದುದು ಒಂದು ದಾಖಲೆಯೇ ಎನಿಸಿಕೊಂಡಿತು.

Advertisement

ಕಳೆದ ಶನಿವಾರ ಜಿಎಸ್‌ಟಿ ಕೌನ್ಸಿಲ್‌ ನೂರಕ್ಕೂ ಆಯ್ದ ಗೃಹೋಪಯೋಗಿ ಉತ್ಪನ್ನಗಳ ಮೇಲಿನ ದರವನ್ನು ಕಡಿತ ಮಾಡಿರುವುದು, ಡಾಲರ್‌ ಎದುರು ರೂಪಾಯಿ ಚೇತರಿಸಿರುವುದು, ಹೊಸದಾಗಿ ವಿದೇಶಿ ಬಂಡವಾಳದ ಒಳ ಹರಿವು ಆರಂಭವಾಗಿರುವುದು, ಮುಂಚೂಣಿ ಶೇರುಗಳ ಭರಾಟೆ ಖರೀದಿ ನಡೆದಿರುವುದು – ಮುಂತಾಗಿ ಅನೇಕ ಕಾರಣಗಳು ಸೆನ್ಸೆಕ್ಸ್‌ ಹೊಸ ದಾಖಲೆಗೆ ಕಾರಣವಾದವು. ಆದರೆ ಇದೇ ವೇಳೆ ಏಶ್ಯನ್‌ ಶೇರು ಮಾರುಕಟ್ಟೆಗಳು ಕೆಳ ಮುಖವಾಗಿದ್ದವು. 

ಸೆನ್ಸೆಕ್ಸ್‌ ನಂತೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 74.55 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,084.75 ಅಂಕಗಳ ಮಟ್ಟದಲ್ಲಿ  ಕೊನೆಗೊಳಿಸಿತು. ಈ ವರ್ಷ ಜನವರಿ 29ರಂದು ದಾಖಲಾಗಿದ್ದ ಗರಿಷ್ಠ ಎತ್ತರದ ಬಳಿಕದಲ್ಲಿ ನಿಫ್ಟಿ ದಾಖಲಿಸಿರುವ ಇನ್ನೊಂದು ಗರಿಷ್ಠ ಇದಾಗಿದೆ. 

ಕಳೆದ ಶುಕ್ರವಾರ ವಿದೇಶಿ ಹೂಡಿಕೆದಾರರು 310.27 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು 50.73 ಕೋಟಿ ರೂ. ಶೇರುಗಳನ್ನು ಮಾರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next