Advertisement

ಆರಂಭಿಕ ವಹಿವಾಟಿನಲ್ಲಿ ಜಿಗಿದು ಬಳಿಕ ಮುಗ್ಗರಿಸಿದ ಮುಂಬಯಿ ಶೇರು

10:50 AM Jun 14, 2017 | |

ಮುಂಬಯಿ : ಅಮೆರಿಕದ ವಾಲ್‌ ಸ್ಟ್ರೀಟ್‌ ನಿನ್ನೆ ಮಂಗಳವಾರದ ವಹಿವಾಟನ್ನು ದಾಖಲೆಯ ಎತ್ತರದಲ್ಲಿ ಕೊನೆಗೊಳಿಸಿರುವುದನ್ನು ಅನುಸರಿಸಿ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ  ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 80 ಅಂಕಗಳ ಜಿಗಿತವನ್ನು ಕಂಡಿತು. 

Advertisement

ಆದರೆ ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌ 3.29 ಅಂಕಗಳ ನಷ್ಟದೊಂದಿಗೆ 31,100.20 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 14.65 ಅಂಕಗಳ ನಷ್ಟದೊಂದಿಗೆ 9,592.25 ಅಂಕಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ರಿಲಯನ್ಸ್‌, ಐಸಿಐಸಿ ಬ್ಯಾಂಕ್‌, ಎಚ್‌ ಡಿ ಎಫ್ ಸಿ, ಯೆಸ್‌ ಬ್ಯಾಂಕ್‌, ಡಾ. ರೆಡ್ಡಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಏಶ್ಯನ್‌ ಶೇರು ಪೇಟೆಯಲ್ಲಿಂದು ಬೆಳಗ್ಗೆ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿತ್ತು. ಜಪಾನಿನ ನಿಕ್ಕಿ ಶೇ.0.10, ಹಾಂಕಾಂಗ್‌ನ ಹ್ಯಾಂಗ್‌ ಸೆಂಗ್‌ ಶೇ.0.05ರಷ್ಟು ಏರಿಕೆಯನ್ನು ಕಂಡವಾದರೆ ಶಾಂಘೈ ಕಾಂಪೋಸಿಟ್‌ ಇಂಡೆಕ್ಸ್‌ ಶೇ.0.22ರ ಕುಸಿತವನ್ನು ಕಂಡಿತು.

Advertisement

Udayavani is now on Telegram. Click here to join our channel and stay updated with the latest news.

Next