ಮುಂಬಯಿ : ಕಳೆದ ಕೆಲ ದಿನಗಳ ನಿರಂತರ ಏರಿಕೆಯ ಫಲವಾಗಿ ದೊರಕಿರುವ ಲಾಭವನ್ನು ನಗದೀಕರಿಸಲು ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂದಾದ ಕಾರಣ ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಹೆಚ್ಚು ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬ್ಯಾಂಕಿಂಗ್, ಎಫ್ ಎಂ ಸಿ ಜಿ, ತೈಲ ಮತ್ತು ಅನಿಲ, ಫಾರ್ಮಾ, ಕ್ಯಾಪಿಟಲ್ ಗೂಡ್ಸ್ ರಂಗದ ಶೇರುಗಳನ್ನು ವಹಿವಾಟುದಾರರು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿದರು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ದಾಖಲಿಸಿ ಸೆನ್ಸೆಕ್ಸ್ 67.70 ಅಂಕಗಳ ನಷ್ಟದೊಂದಿಗೆ 32,974.80 ಅಂಕಗಳ ಮಟ್ಟದಲ್ಲೂ, ನಿಫ್ಟಿ 7.30 ಅಂಕಗಳ ನಷ್ಟದೊಂದಿಗೆ 10,288.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್‌ಬಿಐ, ಐಸಿಐಸಿ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ , ಎಸ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದಿನ ಟಾಪ್ ಗೇನರ್‌ಗಳು : ಬಿಪಿಸಿಎಲ್, ಎಚ್‌ಪಿಸಿಎಲ್, ಎಸ್ ಬ್ಯಾಂಕ್, ಲಾರ್ಸನ್, ಸಿಪ್ಲಾ.
ಟಾಪ್ ಲೂಸರ್‌ಗಳು : ಎಚ್ ಸಿ ಎಲ್ ಟೆಕ್, ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಎಚ್ ಡಿ ಎಫ್ ಸಿ, ಭಾರ್ತಿ ಇನ್‌ಫ್ರಾಟೆಲ್.