ಮುಂಬಯಿ : ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 23 ಅಂಕಗಳ ಚೇತರಿಕೆಯನ್ನು ಕಂಡಿದ್ದ ಮುಂಬಯಿ ಶೇರು ಪೇಟೆ, ಬೆಳಗ್ಗೆ 11 ಗಂಟೆಯ ಹೊತ್ತಿಗೆ 74.53 ಅಂಕಗಳ ನಷ್ಟಕ್ಕೆ ಗುರಿಯಾಗಿ 28,925.03 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17.40 ಅಂಕಗಳ ನಷ್ಟಕ್ಕೆ ಗುರಿಯಾಗಿ 8,929.50 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 48.63 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದರೆ, ನಿಫ್ಟಿ 16.55 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ, ಐಟಿ, ಸನ್ ಫಾರ್ಮಾ, ಏಶ್ಯನ್ ಪೇಂಟ್, ಟಿಸಿಎಸ್ ಮತ್ತು ಲೂಪಿನ್ ಶೇರುಗಳು ಮುನ್ನಡೆಯಲ್ಲಿದ್ದವು. ಆದರೆ ಇನ್‌ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟರ್, ಐಸಿಐಸಿ ಬ್ಯಾಂಕ್ ಮತ್ತು ಮಾರುತಿ ಶೇರುಗಳು ಒತ್ತಡಕ್ಕೆ ಗುರಿಯಾದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.48, ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ.0.02 ಏರಿಕೆಯನ್ನು ಕಂಡಿದೆಯಾದರೆ ಜಪಾನಿನ ನಿಕ್ಕಿ ಶೇ.0.50 ಏರಿಕೆಯನ್ನು ಸಾಧಿಸಿತ್ತು.