ಮುಂಬಯಿ : ಡಾಲರ್ ಎದುರು ರೂಪಾಯಿ ಚೇತರಿಕೆ, ವಿದೇಶ ಬಂಡವಾಳದ ಹೊಸ ಒಳ ಹರಿವು, ಏಶ್ಯನ್ ಶೇರು ಮಾರುಕಟ್ಟೆಗಲ್ಲಿ ಕಂಡು ಬಂದ ತೇಜಿಯೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 300ಕ್ಕೂ ಅಧಿಕ ಅಂಕಗಳ ಮುನ್ನಡೆಯನ್ನು ಸಾಧಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,800 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.
ನಿರಂತರ ಮೂರನೇ ದಿನದ ಏರಿಕೆಯನ್ನು ಮುಂದುವರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಬೆಳಗ್ಗೆ 11 ಗಂಟೆಯ ಹೊತ್ತಿಗೆ 333.94 ಅಂಕಗಳ ಮುನ್ನಡೆಯೊಂದಿಗೆ 36,141.22 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 97.70 ಅಂಕಗಳ ಮುನ್ನಡೆಯೊಂದಿಗೆ 10,877.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 30 ಪೈಸೆಗಳ ಜಿಗಿತವನ್ನು ದಾಖಲಿಸಿ 70.05 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ, ಸನ್ ಫಾರ್ಮ, ಎಸ್ ಬ್ಯಾಂಕ್, ಟೈಟಾನ್ ಕಂಪೆನಿ, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಸನ್ ಫಾರ್ಮಾ , ಎಸ್ ಬ್ಯಾಂಕ್, ಟೈಟಾನ್ ಕಂಪನಿ, ಯುಪಿಎಲ್, ಝೀ ಎಂಟರ್‌ಟೇನ್‌ಮೆಂಟ್. ಟಾಪ್ ಲೂಸರ್‌ಗಳು : ಕೋಲ್ ಇಂಡಿಯಾ, ಎನ್‌ಟಿಪಿಸಿ, ಏಶ್ಯನ್ ಪೇಂಟ್, ಭಾರ್ತಿ ಇನ್‌ಫ್ರಾಟೆಲ್.