ಮುಂಬಯಿ : ಮುಂಚೂಣಿ ಕಂಪೆನಿಗಳ ತ್ತೈಮಾಸಿಕ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ ಎಂಬ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರ ನಿರಂತರ ಎರಡನೇ ದಿನವೂ ಏರಿಕೆಯನ್ನು ಸಾಧಿಸಿ ದಿನದ ವ್ಯವಹಾರವನ್ನು 100 ಅಂಕಗಳ ಮುನ್ನಡೆಯೊಂದಿಗೆ 32,670.37 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ವೇಳೆ 10,200 ಅಂಕಗಳ ಮಟ್ಟವನ್ನು ಏರಿದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.85 ಅಂಕಗಳ ಏರಿಕೆಯೊಂದಿಗೆ 10,207.70 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇಂದಿನ ಟಾಪ್ ಗೇನರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಏಶ್ಯನ ಪೇಂಟ್, ಎಸ್‌ಬಿಐ, ಯುಪಿಎಲ್, ಎನ್‌ಟಿಪಿಸಿ.
ಟಾಪ್ ಲೂಸರ್‌ಗಳು : ಎಚ್‌ಸಿಎಲ್ ಟೆಕ್, ಇಂಡಸ್ ಇಂಡ್ ಬ್ಯಾಂಕ್, ಟೆಕ್ ಮಹೀಂದ್ರ, ಎಸ್ ಬ್ಯಾಂಕ್, ಟಾಟಾ ಮೋಟರ್.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,457 ಶೇರುಗಳು ಮುನ್ನಡೆ ಸಾಧಿಸಿದರೆ 1,290 ಶೇರುಗಳು ಹಿನ್ನಡೆಗೆ ಗುರಿಯಾದವು.