ಮುಂಬಯಿ : ಮಾರ್ಚ್ ತಿಂಗಳ ವಾಯಿದೆ ವಹಿವಾಟು ಗಡುವು ಮುಗಿಯುತ್ತಿರುವ ಹೊರತಾಗಿಯೂ ವಿದೇಶಿ ಬಂಡವಾಳದ ಒಳ ಹರಿವು ನಿರಂತರವಾಗಿ ಸಾಗಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ತೇಜಿ ಮುಂದುವರಿದಿದೆ. ಇಂದು ಬುಧವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 80 ಅಂಕಗಳ ಜಿಗಿತದೊಂದಿಗೆ ಆರಂಭಿಸಿದೆ.
ಹಾಗಿದ್ದರೂ ಅಮೆರಿಕ ಶೇರು ಮಾರುಕಟ್ಟೆ ನಿನ್ನೆ ಹಿನ್ನಡೆಯನ್ನು ಕಂಡ ಕಾರಣ ಇಂದು ಏಶ್ಯನ್ ಶೇರು ಪೇಟೆಗಳಲ್ಲೂ ಹಿಂಜರಿಕೆ ಕಂಡು ಬಂತು. ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 19 ಪೈಸೆಗಳ ಹಿನ್ನಡೆಯನ್ನು ಕಂಡು 69.15 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬೆಳಗ್ಗೆ 10.40ರ ಸುಮಾರಿಗೆ ಸೆನ್ಸೆಕ್ಸ್ 40.71 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,404.18 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1.60 ಅಂಕಗಳ ಏರಿಕೆಯೊಂದಿಗೆ 11,534.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಇನ್‌ಫೋಸಿಸ್, ಎಕ್ಸಿಸ್ ಬ್ಯಾಂಕ್, ರಿಲಯನ್ಸ್, ಟಿಸಿಎಸ್, ಕೋಟಕ್ ಮಹೀಂದ್ರ ಶೇರುಗಳು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಇಂಡಿಯಾ ಬುಲ್ಸ್ ಹೌಸಿಂಗ್, ಇನ್‌ಫೋಸಿಸ್, ಹಿಂಡಾಲ್ಕೊ, ವಿಪ್ರೋ, ಡಾ. ರೆಡ್ಡಿ; ಟಾಪ್ ಲೂಸರ್‌ಗಳು ಎಚ್ ಪಿ ಸಿ ಎಲ್, ಝೀ ಎಂಟರ್‌ಟೇನ್‌ಮೆಂಟ್, ಬಿಪಿಸಿಎಲ್, ಐಓಸಿ, ಎನ್‌ಟಿಪಿಸಿ.