ಮುಂಬಯಿ : ಜೂನ್ ತ್ತೈಮಾಸಿಕದಲ್ಲಿ ಸದೃಢ ಜಿಡಿಪಿ ದಾಖಲಾಗಿರುವ ಹಿನ್ನೆಲೆಯಲ್ಲಿ ಟೆಕ್, ಐಟಿ, ಮತ್ತು ಕ್ಯಾಪಿಟಲ್ ಗೂಡ್ಸ್ ಕೌಂಟರ್‌ಗಳಲ್ಲಿ ಭರ್ಜರಿ ಖರೀದಿ ಕಂಡು ಬಂದ ಪ್ರಯುಕ್ತ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಜಿಗಿತವನ್ನು ದಾಖಲಿಸಿತು.
ಕಳೆದ ವಾರ ನಿರಂತರ ಮೂರು ದಿನಗಳ ವಹಿವಾಟಿನಲ್ಲಿ ಒಟ್ಟು 251.56 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 10.40ರ ಸುಮಾರಿಗೆ 115..92 ಅಂಕಗಳ ನಷ್ಟದೊಂದಿಗೆ 38,760.99 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 30.80 ಅಂಕಗಳ ಮುನ್ನಡೆಯೊಂದಿಗೆ 11,711.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 23 ಪೈಸೆಗಳ ಚೇತರಿಕೆಯನ್ನು ದಾಖಲಿಸಿ ಸಾರ್ವಕಾಲಿಕ ತಳಮಟ್ಟದ 71 ರೂ. ಮಟ್ಟದಿಂದ ಕೊಂಚ ಮಟ್ಟಿಗೆ ಏರಿ 70.77 ರೂ. ಮಟ್ಟಕ್ಕೆ ತಲುಪಿತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ವಿಪ್ರೋ, ರಿಲಯನ್ಸ್, ಎಸ್ ಬ್ಯಾಂಕ್, ಇನ್‌ಫೋಸಿಸ್, ಸನ್ ಫಾರ್ಮಾ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ವಿಪ್ರೋ, ಡಾ. ರೆಡ್ಡೀಸ್ ಲ್ಯಾಬ್, ಲೂಪಿನ್, ಈಚರ್ ಮೋಟರ್, ಹಿಂಡಾಲ್ಕೋ; ಟಾಪ್ ಲೂಸರ್‌ಗಳು: ಅಲ್‌ಟ್ರಾ ಟೆಕ್ ಸಿಮೆಂಟ್, ಗೇಲ್, ಕೋಟಕ್ ಮಹೀಂದ್ರ, ಎಚ್‌ಯುಎಲ್.