ಮುಂಬಯಿ : ನಿರಂತರವಾಗಿ ಹರಿದು ಬರುತ್ತಿರುವ ವಿದೇಶೀ ನೇರ ಬಂಡವಾಳ ಹೂಡಿಕೆ ಹಾಗೂ ಚಿಲ್ಲರೆ ಹೂಡಿಕೆದಾರರ ಅತ್ಯುತ್ಸಾಹದ ಖರೀದಿಯಿಂದ ಗರಿಗೆದರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟಿಗೆ ಅತ್ತುತ್ತಮ ಆರಂಭವನ್ನು ಕಂಡಿದೆ.
ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 102.69 ಅಂಕಗಳ ಮುನ್ನಡೆಯೊಂದಿಗೆ 30,424.81 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.90 ಅಂಕಗಳ ಮುನ್ನಡೆಯೊಂದಿಗೆ 9,467.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಐಸಿಐಸಿ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ರಿಲಯನ್ಸ್ ಮತ್ತು ಎಕ್ಸಿಸ್ ಬ್ಯಾಂಕ್ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಎಸಿಸಿ, ಭಾರ್ತಿ ಏರ್‌ಟೆಲ್, ಅಲ್ಟ್ರಾ ಟೆಕ್ ಸಿಮೆಂಟ್, ಡಾ. ರೆಡ್ಡೀಸ್ ಲ್ಯಾಬ್, ಐಡಿಯಾ ಸೆಲ್ಯುಲರ್ ಟಾಪ್ ಗೇನರ್ ಎನಿಸಿಕೊಂಡಿದ್ದವು.
ಇಂದು ಬೆಳಗ್ಗಿನ ವ್ಯವಹಾರದಲ್ಲಿ ಸೆನ್ಸೆಕ್ಸ್ 30,503.48 ಅಂಕಗಳ ಇಂಟ್ರಾ ಡೇ ಎತ್ತರವನ್ನು ಕಂಡದ್ದು ಒಂದು ದಾಖಲೆ ಎನಿಸಿತು. ಕಳೆದ ಮೇ 11ರಂದು ಸೆನ್ಸೆಕ್ಸ್ ಇಂಟ್ರಾ ಡೇ ವಹಿವಾಟಿನಲ್ಲಿ 30,366.43 ಅಂಕಗಳ ಎತ್ತರವನ್ನು ಕಂಡಿತ್ತು.