ಮುಂಬಯಿ : ನಿರಂತರ ಎರಡನೇ ದಿನವಾಗಿ ಇಂದು ಗುರುವಾರ ಕೂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನಾಂತ್ಯದಲ್ಲಿ ಹೊಸ ಸಾರ್ವಕಾಲಿಕ ಎತ್ತರವನ್ನು ತಲುಪಿದವು.
ಸೆನ್ಸೆಕ್ಸ್ ಇಂದು ದಿನದ ವಹಿವಾಟನ್ನು 178 ಅಂಕಗಳ ಏರಿಕೆಯೊಂದಿಗೆ ಹೊಸ ಎತ್ತರವಾಗಿ 35,260.29 ಅಂಕಗಳ ಮಟ್ಟವನ್ನು ತಲುಪಿತು. ಇದೇ ರೀತಿ ನಿಫ್ಟಿ 28.45 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು ಹೊಸ ಎತ್ತರವಾಗಿ 10,817 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಿದೇಶಿ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹೂಡುತ್ತಿರುವುದೇ ಮುಂಬಯಿ ಶೇರು ಪೇಟೆಯ ಹೊಸ ಹೊಸ ಎತ್ತರಕ್ಕೆ ಕಾರಣವಾಗಿದೆ. ಸೆನ್ಸೆಕ್ಸ್ ಕಳೆದೆರಡು ದಿನಗಳ ವಹಿವಾಟಿನಲ್ಲಿ 310.77 ಅಂಕಗಳನ್ನು ಸಂಪಾದಿಸಿದೆ.
ಇಂದಿನ ಟಾಪ್ ಗೇನರ್: ಐಟಿಸಿ, ಯುಪಿಎಲ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಚ್ ಡಿ ಎಫ್ ಸಿ, ಕೋಟಕ್ ಮಹೀಂದ್ರ; ಟಾಪ್ ಲೂಸರ್ : ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್, ಹಿಂಡಾಲ್ಕೊ, ಅಲ್‌ಟ್ರಾ ಟೆಕ್ ಸಿಮೆಂಟ್, ಟಾಟಾ ಸ್ಟೀಲ್.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳು 3,084; ಮುನ್ನಡೆ ಸಾಧಿಸಿದವುಗಳು 696, ಹಿನ್ನಡೆ ಕಂಡವುಗಳು 2,262; ಯಾವುದೇ ಬದಲಾವಣೆ ಕಾಣದವುಗಳು 126.