ಮುಂಬಯಿ : ದಿನದ ವಹಿವಾಟಿನ ಕೊನೇ ಕ್ಷಣಗಳಲ್ಲಿ ತೀವ್ರ ಮಾರಾಟ ಒತ್ತಡ ಕಂಡು ಬಂದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 265.83 ಅಂಕಗಳ ನಷ್ಟದೊಂದಿಗೆ 31,258.85 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 83.05 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 9,754.35 ಅಂಕಗಳ ಮಟ್ಟದಲ್ಲಿ ಮುಗಿಸಿತು.
ಇಂದು ಕೂಡ ಇನ್‌ಫೋಸಿಸ್ ಶೇರು ಕುಸಿತದ ಹಾದಿಯಲ್ಲಿ ಮುಂದುವರಿಯಿತು. ದಿನಾಂತ್ಯಕ್ಕೆ ಇನ್‌ಫೋಸಿಸ್ ಶೇರು 46.35 ರೂ. ನಷ್ಟದೊಂದಿಗೆ (ಶೇ.5.02) 876.90 ರೂ. ಧಾರಣೆಯಲ್ಲಿ ಸ್ಥಿತವಾಯಿತು.
ದುರ್ಬಲ ವಹಿವಾಟು ಹರಹು ದಾಖಲಾದ ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 907 ಶೇರುಗಳು ಮುನ್ನಡೆ ಸಾಧಿಸಿದವು; 1,715 ಶೇರುಗಳು ಹಿನ್ನಡೆಗೆ ಗುರಿಯಾದವು; 117 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ಎಕ್ಸಿಸ್ ಬ್ಯಾಂಕ್, ಟಿಸಿಎಸ್, ಈಶರ್ ಮೋಟರ್, ಟೆಕ್ ಮಹೀಂದ್ರ, ಮಹೀಂದ್ರ ಆ್ಯಂಡ್ ಮಹೀಂದ್ರ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಇನ್‌ಫೋಸಿಸ್, ಭಾರ್ತಿ ಇನ್‌ಫ್ರಾಟೆಲ್, ಬ್ಯಾಂಕ್ ಆಫ್ ಬರೋಡ, ಒಎನ್‌ಜಿಸಿ, ಡಾ. ರೆಡ್ಡಿ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.