ಮುಂಬಯಿ : ಆರಂಭಿಕ ವಹಿವಾಟಿನಲ್ಲಿ 119 ಅಂಕಗಳ ಮುನ್ನಡೆಯನ್ನು ಸಾಧಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 59.36 ಅಂಕಗಳ ನಷ್ಟದೊಂದಿಗೆ 33,777.38 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ 19 ಅಂಕಗಳ ಅಲ್ಪ ಕುಸಿತವನ್ನು ಕಂಡ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ದಿನದ ವಹಿವಾಟನ್ನು 10,444.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 33,956 ಅಂಕಗಳ ಹೊಸ ಎತ್ತರವನ್ನು ಸಾಧಿಸಿತ್ತಾದರೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 10,494 ಅಂಕಗಳ ಎತ್ತರವನ್ನು ಕಂಡಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,583 ಶೇರುಗಳು ಮುನ್ನಡೆ ಸಾಧಿಸಿದರೆ 1,124 ಶೇರುಗಳು ಹಿನ್ನಡೆಗೆ ಗುರಿಯಾದವು. ಕಳೆದ ನಾಲ್ಕು ದಿನಗಳ ನಿರಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 783.79 ಅಂಕಗಳನ್ನು ಸಂಪಾದಿಸಿತ್ತು.
ಇಂದು ಅತ್ಯಂತ ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಮಾರುತಿ ಸುಜುಕಿ, ಮಹಿಂದ್ರ, ಟಾಟಾ ಸ್ಟೀಲ್, ಟಾಟಾ ಮೋಟರ್, ಐಸಿಐಸಿಐ ಬ್ಯಾಂಕ್.
ಇಂದಿನ ಟಾಪ್ ಗೇನರ್‌ಗಳು : ಹಿಂಡಾಲ್ಕೊ, ಒಎನ್‌ಜಿಸಿ, ವಿಪ್ರೋ,ಹೀರೋ ಮೋಟೋ ಕಾರ್ಪ್, ಇನ್‌ಫೋಸಿಸ್.
ಟಾಪ್ ಲೂಸರ್‌ಗಳು : ಈಶರ್ ಮೋಟರ್, ಡಾ.ರೆಡ್ಡಿ, ಭಾರ್ತಿ ಏರ್‌ಟೆಲ್, ಅಂಬುಜಾ ಸಿಮೆಂಟ್ಸ್, ಎಚ್ ಪಿ ಸಿ ಎಲ್.