ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ಧನಾತ್ಮಕ ಸ್ಥಿತಿ ತೋರಿಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಮಾರ್ಚ್ ತಿಂಗಳ ವಾಯಿದೆ ವಹಿವಾಟು ಸರಣಿಯನ್ನು ದೃಢತೆಯೊಂದಿಗೆ ಆರಂಭಿಸಿ, ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 107 ಅಂಕಗಳ ಜಿಗಿತ ಸಾಧಿಸಿದೆ.
ಡಾಲರ್ ಎದುರು ರೂಪಾಯಿ ವಿನಿಮಯ ದರ 17 ಪೈಸೆಯಷ್ಟು ಸುಧಾರಿಸಿ 64.87ರ ಮಟ್ಟಕ್ಕೆ ತಲಪಿರುವುದು ಕೂಡ ಮುಂಬಯಿ ಶೇರು ಪೇಟೆಗೆ ಹೊಸ ಉತ್ತೇಜನ ತುಂಬಿತು. ನಿನ್ನೆಯ ದಿನ ರೂಪಾಯಿ ಡಾಲರ್ ಎದುರು 28 ಪೈಸೆ ಕುಸಿದು ತೀವ್ರ ಆತಂಕ ಸೃಷ್ಟಿಸಿತ್ತು.
ಇಂದು ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 96.85 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,916.35 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32.30 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,415.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಸನ್ ಫಾರ್ಮಾ, ಟಾಟಾ ಸ್ಟೀಲ್, ಇನ್‌ಫೋಸಿಸ್, ರಿಲಯನ್ಸ್, ಎಸ್ ಬ್ಯಾಂಕ್ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಸನ್ ಫಾರ್ಮಾ, ಟಾಟಾ ಸ್ಟೀಲ್, ಅರಬಿಂದೋ ಫಾರ್ಮಾ, ಎಸ್ ಬ್ಯಾಂಕ್ ಮತ್ತು ಸಿಪ್ಲಾ ಶೇರುಗಳು ಮುನ್ನಡೆ ಕಂಡವು; ಟಾಪ್ ಲೂಸರ್‌ಗಳಾಗಿ ಗೇಲ್, ಈಶರ್ ಮೋಟರ್, ಮಹೀಂದ್ರ, ಏಶ್ಯನ್ ಪೇಂಟ್ಸ್, ಟಿಸಿಎಸ್ ಶೇರುಗಳು ಹಿನ್ನಡೆಗೆ ಗುರಿಯಾದವು.