Advertisement

ಜಾಗತಿಕ ಪೇಟೆಯಲ್ಲಿ ಸ್ಥಿರತೆ: ಮುಂಬಯಿ ಶೇರು 146 ಅಂಕ ಮುನ್ನಡೆ

11:18 AM May 07, 2018 | Team Udayavani |

ಮುಂಬಯಿ : ಡಾಲರ್‌ ಎದುರು ರೂಪಾಯಿ ಬಲವರ್ಧನೆಗೊಂಡಿರುವುದನ್ನು ಅನುಸರಿಸಿ ದೇಶೀಯ ಹೂಡಿಕೆದಾರರು ಮುಂಚೂಣಿ ಶೇರುಗಳ ಭರಾಟೆಯ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 146.18 ಅಂಕಗಳ ಏರಿಕೆಯೊಂದಿಗೆ 35,0161.56 ಅಂಕಗಳ ಮಟ್ಟವನ್ನು ತಲುಪಿತು. 

Advertisement

ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಒಟ್ಟು 261.04 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಇಂದಿನ ಏರು ಗತಿಯ ವಹಿವಾಟಿನಲ್ಲಿ ಕನ್ಸೂಮರ್‌ ಡ್ನೂರೇಬಲ್ಸ್‌, ರಿಯಲ್ಟಿ, ಐಟಿ, ಟೆಕ್‌ ಮತ್ತು ಬ್ಯಾಂಕಿಂಗ್‌ ಶೇರುಗಳು ಶೇ.1.56ರಷ್ಟು ಏರಿದವು. 

ಮಹೀಂದ್ರ, ಭಾರ್ತಿ ಏರ್‌ಟೆಲ್‌, ಬಜಾಜ್‌ ಆಟೋ, ಇನ್‌ಫೋಸಿಸ್‌, ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ವಿಪ್ರೋ, ಕೋಟಕ್‌ ಬ್ಯಾಂಕ್‌, ಒಎನ್‌ಜಿಸಿ, ಟಾಟಾ ಸ್ಟೀಲ್‌, ಎಸ್‌ಬಿಐ, ಆರ್‌ಐಎಲ್‌, ಟಾಟಾ ಮೋಟರ್‌, ಲಾರ್ಸನ್‌, ಎಸ್‌ ಬ್ಯಾಂಕ್‌ ಶೇರುಗಳು ಶೇ.1.76ರಷ್ಟು ಏರಿದವು. 

ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 132.75 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,048.13 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 41.50 ಅಂಕಗಳ ಏರಿಕೆಯೊಂದಿಗೆ 10,659.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next