ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸ್ಥಿತಿ ಇರುವುದು ಹಾಗೂ ವಿದೇಶೀ ಹೂಡಿಕೆಯ ಹರಿವು ಹೆಚ್ಚಿರುವುದನ್ನು ಅನುಲಕ್ಷಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 61 ಅಂಕಗಳ ಮುನ್ನಡೆಯನ್ನು ಪಡೆಯಿತು.
ಬೆಳಗ್ಗೆ 10.20ರ ಹೊತ್ತಿಗೆ ಸೆನೆಕ್ಸ್ 6.99 ಅಂಕಗಳ ನಷ್ಟದೊಂದಿಗೆ 32,318.42 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.20 ಅಂಕಗಳ ನಷ್ಟದೊಂದಿಗೆ 10,066.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಹೀರೋ ಮೋಟೋ ಕಾರ್ಪ್, ಎಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಗೇಲ್, ಹೀರೋ ಮೋಟೋ ಕಾರ್ಪ್, ಅದಾನಿ ಪೋರ್ಟ್ ಶೇರುಗಳು ಮಿನುಗಿದವು. ಟಾಪ್ ಲೂಸರ್‌ಗಳಾದ ಎನ್‌ಟಿಪಿಸಿ, ಎಚ್‌ಯುಎಲ್, ಟಿಸಿಎಸ್, ಏಶ್ಯನ್ ಪೇಂಟ್, ಇನ್‌ಫೋಸಿಸ್ ಶೇರುಗಳು ಹಿನ್ನಡೆ ಕಂಡವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಜಪಾನಿನ ನಿಕ್ಕಿ ಶೇ.0.63, ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಶೇ.0.28 ಮುನ್ನಡೆ ಕಂಡರೆಚೀನದ ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ.0.16ರಷ್ಟು ಹಿನ್ನಡೆಗೆ ಗುರಿಯಾಯಿತು.