ಮುಂಬಯಿ : ಕಳೆದ ನಿರಂತರ ಐದು ದಿನಗಳಿಂದ ಏರುಗತಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಲಾಭ ನಗದೀಕರಣದ ಭರಾಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಹಿನ್ನೆಯನ್ನು ಕಂಡಿತು.
ಐಟಿ, ಮೆಟಲ್, ಬ್ಯಾಂಕಿಂಗ್, ಕನ್ಸೂಮರ್ ಡ್ಯುರೇಬಲ್, ಪವರ್ ಮತ್ತು ಆಟೋ ರಂಗದ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ತೀವ್ರ ಮಾರಾಟವನ್ನು ಕಂಡದ್ದಲ್ಲದೆ ವಿದೇಶಿ ಬಂಡವಾಳ ಕೂಡ ಗಮನಾರ್ಹ ಪ್ರಮಾಣದ ಹೊರ ಹರಿವನ್ನು ಕಂಡಿತು.
ಬೆಳಗ್ಗೆ 11.30ರ ಸುಮಾರಿಗೆ ಸೆನ್ಸೆಕ್ಸ್ 214.94 ಅಂಕಗಳ ನಷ್ಟದೊಂದಿಗೆ 36,364.02 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70.60 ಅಂಕಗಳ ನಷ್ಟದೊಂದಿಗೆ 10,891.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಸನ್ ಫಾರ್ಮಾ, ರಿಲಯನ್ಸ್, ಕೋಟಕ್ ಮಹೀಂದ್ರ, ಎಸ್ ಬ್ಯಾಂಕ್ ಮತ್ತು ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ಐದು ಪೈಸೆ ಕುಸಿತವನ್ನು ಕಂಡ ರೂಪಾಯಿ 71.23 ರೂ. ಮಟ್ಟದಲ್ಲಿ ವ್ಯವಹಾರ ನಿರತವಾತ್ತು.