Advertisement

3 ವಾರಗಳ ಕನಿಷ್ಠಕ್ಕೆ ರೂಪಾಯಿ: ಮುಂಬಯಿ ಶೇರು 147 ಅಂಕ ನಷ್ಟ

04:19 PM Sep 06, 2017 | |

ಮುಂಬಯಿ : ಡಾಲರ್‌ ಎದುರು ರೂಪಾಯಿ ಮೂರು ವಾರಗಳ ಕನಿಷ್ಠಕ್ಕೆ ಕುಸಿದಿರುವುದು ಮತ್ತು ಉತ್ತರ ಕೊರಿಯ ಪರಮಾಣು ಹುಚ್ಚಾಟ ಸಮರೋತ್ಸಾಹಕ್ಕೆ ಕಾರಣವಾಗಿರುವುದು ಇಂದು ಮುಂಬಯಿ ಶೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಯಿತು.

Advertisement

ಇಂದು ಬುಧವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 147.58 ಅಂಕಗಳ ನಷ್ಟದೊಂದಿಗೆ 31,661.97 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36 ಅಂಕಗಳ ಕುಸಿತದೊಂದಿಗೆ 9,916.20 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು  ಕೊನೆಗೊಳಿಸಿತು.

ಹಿಂಡಾಲ್ಕೊ, ಅಲ್‌ಟ್ರಾ ಟೆಕ್‌ ಸಿಮೆಂಟ್‌, ಗೇಲ್‌, ಎಸ್‌ ಬ್ಯಾಂಕ್‌, ಕೋಟಕ್‌ಮಹೀಂದ್ರ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡರೆ ಸನ್‌ ಫಾರ್ಮಾ, ಐಡಿಯಾ ಸೆಲ್ಯುಲರ್‌, ಬಾಶ್‌, ಐಟಿಸಿ, ಲೂಪಿನ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು.  

Advertisement

Udayavani is now on Telegram. Click here to join our channel and stay updated with the latest news.

Next