Advertisement

ನಿರಾಶಾದಾಯಕ ಕಾರ್ಪೊರೇಟ್‌ ಫ‌ಲಿತಾಂಶ: ಸೆನ್ಸೆಕ್ಸ್‌ 22 ಅಂಕ ನಷ್ಟ

04:59 PM Jul 19, 2018 | udayavani editorial |

ಮುಂಬಯಿ : ಕಂಪೆನಿಗಳ ಜೂನ್‌ ತ್ತೈಮಾಸಿಕ ಫ‌ಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವ ಕಾರಣಕ್ಕೆ ನಿರಾಶೆಗೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರ ದಿನಪೂರ್ತಿ ಏರಿಳಿತಗಳನ್ನು ಕಂಡು 22.21 ಅಂಕಗಳ ನಷ್ಟದೊಂದಿಗೆ 36,351.23 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು. 

Advertisement

ಡಾಲರ್‌ ಎದುರು ರೂಪಾಯಿ ಕುಸಿತ ನಿರಂತರವಾಗಿದ್ದು ಅದೀಗ 69 ರೂ. ದಾಟಿರುವುದು ಶೇರು ಮಾರುಕಟ್ಟೆಯ ಕಳವಳಕ್ಕೆ ಕಾರಣವಾಯಿತು. 

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.35 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,957.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,727 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 827 ಶೇರುಗಳು ಮುನ್ನಡೆ ಸಾಧಿಸಿದವು; 1,754 ಶೇರುಗಳು ಹಿನ್ನಡೆ ಕಂಡವು; 146 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next