ಮುಂಬಯಿ : ಏಶ್ಯನ್ ಶೇರುಪೇಟೆಗಳಲ್ಲಿ ಅಸ್ಥಿರತೆ ತೋರಿ ಬಂದುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಮೆಟಲ್, ಆಟೋ ಶೇರಗಳ ಭಾರೀ ಮಾರಾಟದ ಕಾರಣ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,900 ಅಂಕಕ್ಕಿಂತ ಕೆಳ ಮಟ್ಟಕ್ಕೆ ಜಾರಿತು.
ಬೆಳಗ್ಗೆ 10.30 ರ ಸುಮಾರಿಗೆ ಸೆನ್ಸೆಕ್ಸ್ 117.54 ಅಂಕಗಳ ನಷ್ಟದೊಂದಿಗೆ 36,137.03 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 42.10 ಅಂಕಗಳ ನಷ್ಟದೊಂದಿಗೆ 10,868.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರಿನ ಇಂದಿನ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 23 ಪೈಸೆಗಳ ಕುಸಿತ ಕಂಡು 69.70 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಈಶರ್ ಮೋಟರ್, ಮಹೀಂದ್ರ, ಎಸ್‌ಬಿಐ, ಟಾಟಾ ಸ್ಟೀಲ್, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಿಸಿಎಸ್, ವಿಪ್ರೋ, ಟೆಕ್ ಮಹೀಂದ್ರ, ಇನ್‌ಫೋಸಿಸ್, ಭಾರ್ತಿ ಇನ್‌ಫ್ರಾಟೆಲ್; ಟಾಪ್ ಲೂಸರ್‌ಗಳು : ಈಶರ್ ಮೋಟರ್, ಮಹೀಂದ್ರ, ಜೆಎಸ್‌ಡಬ್ಲ್ಯು ಸ್ಟೀಲ್, ಹಿಂಡಾಲ್ಕೊ, ವೇದಾಂತ.