ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 287.15 ಅಂಕಗಳ ನಷ್ಟದೊಂದಿಗೆ 3,847.23 ಅಂಕಗಳ ಮಟ್ಟದಲ್ಲಿ, ನಿರಂತರ ನಾಲ್ಕನೇ ದಿನದ ಕುಸಿತವನ್ನು ಅನುಭವಿಸಿ, ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 98.50 ಅಂಕಗಳ ನಷ್ಟದೊಂದಿಗೆ 10,146.80 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿದೆ.
ಮಾರುಕಟ್ಟೆಯಲ್ಲಿನ ವಹಿವಾಟಿನ ಹರಹು ಇಂದು ನೇತ್ಯಾತ್ಮಕವಾಗಿತ್ತು. 822 ಶೇರುಗಳು ಮುನ್ನಡೆ ಸಾಧಿಸಿದರೆ 1,747 ಶೇರುಗಳು ಹಿನ್ನಡೆಗೆ ಗುರಿಯಾದವು; 1,013 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿ ಎಫ್ ಸಿ, ಎಚ್‌ಪಿಸಿಎಲ್, ಇಂಡಿಯಾ ಬುಲ್ಸ್ ಹೌಸಿಂಗ್ ಶೇರುಗಳು ಟಾಪ್ ಗೇನರ್‌ಗಳಾಗಿದ್ದವು; ಸನ್ ಫಾರ್ಮಾ, ಏಶ್ಯನ್ ಪೇಂಟ್ ಶೇರುಗಳು ಟಾಪ್ ಲೂಸರ್‌ಗಳೆನಿಸಿಕೊಂಡವು.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಸ್ವಲ್ಪ ಮಟ್ಟಿನ ಇಳಿಕೆಯನ್ನು ಕಂಡಿತಾದರೂ, ಡಾಲರ್ ಎದುರು ರೂಪಾಯಿಯ ದೌರ್ಬಲ್ಯ, ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದು ಹಿನ್ನಡೆಗೆ ಗುರಿಯಾಯಿತು.