ಮುಂಬಯಿ : ಹೊಸ ಸಾರ್ವಕಾಲಿಕ ತಳ ಮಟ್ಟಕ್ಕೆ ಕುಸಿದ ರೂಪಾಯಿ, ವಿದೇಶಿ ಬಂಡವಾಳದ ಮುಂದುವರಿದ ಹೊರ ಹರಿವು ಮತ್ತು ಏರುತ್ತಿರುವ ಕಚ್ಚಾ ತೈಲ ಬೆಲೆ ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಕುಸಿತವನ್ನು ಕಂಡಿತು.
ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್ 217.96 ಅಂಕಗಳ ನಷ್ಟದೊಂದಿಗೆ 36,308.18 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 77.80 ಅಂಕಗಳ ನಷ್ಟದೊಂದಿಗೆ 10,930.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ ಬ್ಯಾಂಕ್, ಬಜಾಜ್ ಫಿನಾನ್ಸ್, ಎಕ್ಸಿಸ್ ಬ್ಯಾಂಕ್, ವೇದಾಂತ, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಸ್ ಬ್ಯಾಂಕ್, ವೇದಾಂತ, ಎಚ್ ಪಿ ಸಿಎಲ್, ಹಿಂಡಾಲ್ಕೋ, ಟಾಟಾ ಸ್ಟೀಲ್; ಟಾಪ್ ಲೂಸರ್‌ಗಳು : ಈಶರ್ ಮೋಟರ್, ಭಾರ್ತಿ ಇನ್‌ಫ್ರಾಟೆಲ್, ಗ್ರಾಸಿಂ, ಮಹೀಂದ್ರ, ಟಿಸಿಎಸ್.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 43 ಪೈಸೆಗಳ ಕುಸಿತವನ್ನು ಕಂಡು ಹೊಸ ಸಾರ್ವಕಾಲಿಕ ತಳಮಟ್ಟವಾಗಿ 73.34 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.