Advertisement

ಮೂರನೇ ದಿನವೂ ಕುಸಿತ: ಮುಂಬಯಿ ಶೇರು 216 ಅಂಕ ನಷ್ಟ

04:40 PM Aug 09, 2017 | |

ಮುಂಬಯಿ : ಕೊರಿಯ ಪರ್ಯಾಯ ದ್ವೀಪದಲ್ಲಿ ಸಮರ ಉದ್ವಿಗ್ನತೆ ಹೆಚ್ಚಿರುವುದನ್ನು ಲೆಕ್ಕಿಸಿ ಜಾಗತಿಕ ಶೇರು ಪೇಟೆಗಳಲ್ಲಿ ಅಸ್ಥಿರತೆ ಮೂಡಿ ಬಂದಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ನಿರಂತರ ಮೂರನೇ ದಿನವೂ ಕುಸಿತಕ್ಕೆ ಗುರಿಯಾಗಿ, ಇಂದು ಬುಧವಾರದ ವಹಿವಾಟನ್ನು 216.35 ಅಂಕಗಳ ನಷ್ಟದೊಂದಿಗೆ 31,797.84 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70.05 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 9,908.05 ಅಂಕಗಳ ಮಟ್ಟದಲ್ಲಿ ಮುಗಿಸಿತು.

ಇಂದಿನ ವಹಿವಾಟಿನಲ್ಲಿ ಮಾರುಕಟ್ಟೆ ಹರಹು ದುರ್ಬಲವಾಗಿತ್ತು. ಇಂದು 2,881 ಶೇರುಗಳು ವಹಿವಾಟಿಗೆ ಒಳಪಟ್ಟವು; 692 ಶೇರುಗಳು ಮಾತ್ರವೇ ಮುನ್ನಡೆ ಕಂಡವು; 2,051 ಶೇರುಗಳು ಹಿನ್ನಡೆಗೆ ಗುರಿಯಾದವು; 138 ಶೇರುಗಳ ಧಾರಣೆ ಬದಲಾಗಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next